ದೇಶ ವಿದೇಶ

ಪಾಕಿಸ್ತಾನ ಪ್ರೀಯರನ್ನು ಶಿಕ್ಷಿಸಲೇಬೇಕು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ

ಢಾಕಾ: ಪಾಕಿಸ್ತಾನವನ್ನು ಪ್ರೀತಿಸುವವರನ್ನು ಶಿಕ್ಷಿಸಲೇಬೇಕು ಎಂದು ಹೇಳಿದ ಬಾಂಗ್ಲಾದೇಶ ಪ್ರಧಾನಿ “ಶೇಖ್ ಹಸೀನಾ”ರವರು ಭಾನುವಾರ ರಾಜಧಾನಿ ಢಾಕಾದಲ್ಲಿ ಆಡಳಿತಾ ರೂಢ ಅವಾಮಿ ಲೀಗ್ ಪಕ್ಷ ಬಂಗಬಂಧು ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ ನಲ್ಲಿ ಆಯೋಜನೆ ಮಾಡಲಾಗಿದ್ದ ‘ಬಾಂಗ್ಲಾ ವಿಮೋಚನಾ ದಿನಾಚರಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶೇಖ್ ಹಸೀನಾರವರು ಪಾಕಿಸ್ತಾನದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿರುವ ಪಾಕಿಸ್ತಾನಿ ಪ್ರಿಯರನ್ನು ಪತ್ತೆ ಮಾಡಿ ಶಿಕ್ಷಿಸಲೇ ಬೇಕಿದೆ ಎಂದು ಹೇಳಿದರು. “1971 ಮಾರ್ಚ್ 25ರಂದು ಬಾಂಗ್ಲಾ ವಿಮೋಚನೆ ವೇಳೆ ಪಾಕಿಸ್ತಾನ ನಮ್ಮ ನಾಡಿನಲ್ಲಿ ನಡೆಸಿದ ನರಮೇಧವನ್ನು ನೆನರಪಿಸಿಕೊಳ್ಳಿ ಲಕ್ಷಾಂತರ ಅಮಾಯಕರನ್ನು ಕೊಂದು ನಮ್ಮ ಮನೆಯ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ವೆಸಗಿ ಕ್ರೂರವಾಗಿ ಕೊಂದು ಹಾಕಲಾಗಿತ್ತು. ಆ ದೃಶ್ಯಗಳು ಇನ್ನೂ ನಮ್ಮ ಕಣ್ಣ ಮುಂದಿದೆ”. ದೇಶದಲ್ಲಿರುವ ಪಾಕಿಸ್ತಾನಿ ಪ್ರಿಯರನ್ನು  ಗುರುತಿಸಲು ಬಾಂಗ್ಲಾದೇಶ ಪ್ರಜೆಗಳು ಸರ್ಕಾರಕ್ಕೆ ನೆರವು ನೀಡಬೇಕು. ಇಲ್ಲವಾದಲ್ಲಿ ನಮ್ಮ ನೆಲದಲ್ಲಿ ನಮ್ಮ ಅಸ್ಥಿತ್ವವೇ ಇರುವುದಿಲ್ಲ ಎಂದು ಹಸೀನಾ ಹೇಳಿದರು.

 

 

 

About the author

ಕನ್ನಡ ಟುಡೆ

Leave a Comment