ರಾಷ್ಟ್ರ

ಪಾಕಿಸ್ತಾನ  ಭಾರತವನ್ನು ಒಡೆಯಲು ಸಂಚು ಮಾಡುತ್ತಿದೆ: ರಾಜನಾಥ್ ಸಿಂಗ್ ಆರೋಪ

ದಾದ್ರಾ ನಗರ್ ಹವೇಲಿ: ಭಯೋತ್ಪಾದನೆ ಮೂಲಕ ಭಾರತವನ್ನು ಒಡೆಯಲು ನೆರೆಯ ದೇಶ ಪಿತೂರಿ ನಡೆಸುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್  ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ. ಭಾರತಕ್ಕೆ ಭಯೋತ್ಪಾದನೆಯ ತೊಂದರೆ ಮತ್ತು ಪೆಟ್ಟು ಕೇಳಿಬರುತ್ತಲೇ ಇದೆ. ಇದಕ್ಕೆ ನೆರೆಯ ಪಾಕಿಸ್ತಾನದ ಪಿತೂರಿಯೇ ಕಾರಣವಾಗಿದೆ. ಇದಕ್ಕೆ ತಕ್ಕ ಶಾಸ್ತಿ ಪಾಕಿಸ್ತಾನಕ್ಕೆ ಸಿಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಒತ್ತಡ ಬರುತ್ತದೆ ಎಂದು ಹೇಳಿದರು. ಅವರು ದಾದ್ರಾ ನಗರ್ ಹವೇಲಿಯಲ್ಲಿ ವಿವಿಧ ಅಭಿವೃದ್ಧಿಪರ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ಪಾಕಿಸ್ತಾನ ಜೊತೆ ಉತ್ತಮ ಬಾಂಧವ್ಯ ಇರಿಸಲು ಪ್ರಯತ್ನಿಸುತ್ತಿದ್ದರೂ ಕೂಡ ಪಾಕಿಸ್ತಾನ ಕ್ಷಿಷ್ಟಗೊಳಿಸುತ್ತಿದೆ. ನೆರೆಯ ರಾಷ್ಟ್ರಗಳನ್ನು ಭಾರತ ಮಿತ್ರರಾಷ್ಟ್ರವಾಗಿಯೇ ಕಾಣುತ್ತಿದೆ. ಆದರೆ ಪಾಕಿಸ್ತಾನ ಅದನ್ನು ಸ್ವೀಕರಿಸುವ ಮನೋಭಾವನೆಯಲ್ಲಿಲ್ಲ. ಎಲ್ಲಾ ಅಂತಾರಾಷ್ಟ್ರೀಯ ಶಕ್ತಿಗಳು ಒತ್ತಡವನ್ನು ಹಾಕಿ ಪಾಕಿಸ್ತಾನ ಭಯೋತ್ಪಾದನೆ ವಿಷಯದಲ್ಲಿ ಮಣಿಯಬೇಕಾದ ಪರಿಸ್ಥಿತಿ ಬಂದೇ ಬರುತ್ತದೆ ಎಂದು ಹೇಳಿದರು.

 

About the author

ಕನ್ನಡ ಟುಡೆ

Leave a Comment