ರಾಷ್ಟ್ರ ಸುದ್ದಿ

ಪಾಕಿಸ್ತಾನ ಸಮುದ್ರ ಪ್ರವೇಶಿಸಿದ್ದ ಆಂಧ್ರದ ನಾಲ್ವರು ಮೀನುಗಾರರ ಬಂಧನ

ಅಹಮದಾಬಾದ್: ಗುಜರಾತ್ ಕರಾವಳಿ ಮೂಲಕ ಪಾಕಿಸ್ತಾನದ ಸಮುದ್ರ ಪ್ರವೇಶಿಸಿದ್ದ ಆಂಧ್ರದ ನಾಲ್ಕು ಮೀನುಗಾರರನ್ನು ಪಾಕ್ ಕರಾವಳಿ ರಕ್ಷಣ ಪಡೆ ಬಂಧಿಸಿದೆ.
ಬಂಧಿತ ಮೀನುಗಾರರು ಕೆಲ ವರ್ಷಗಳ ಹಿಂದೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯಿಂದ ಗುಜರಾತ್ ಗೆ ವಲಸೆ ಹೋಗಿದ್ದರು. ಬಂಧಿತ ಮೀನುಗಾರರನ್ನು ಗನಗಾಲ ರಾಮರಾವ್, ಕೇಶಮು ಯೆರ್ರಯ್ಯ, ಸುರದ ಅಪ್ಪ ರಾವ್ ಹಾಗೂ ಸುರದ ಕಿಶೋರೆ ಎಂದು ಗುರುತಿಸಲಾಗಿದೆ. ಎಲ್ಲರೂ ಶ್ರೀಕಾಕುಳಂ ಮೂಲದವರಾಗಿದ್ದು ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳಿದ್ದರು. ಇತರೆ ಮೀನುಗಾರಒಡನೆ ಈ ನಾಲ್ವರನ್ನೂ ಪಾಕಿಸ್ತಾನ ರಕ್ಷಣಾ ಪಡೆ ಬಂಧಿಸಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈ ಸಂಬಂಧ ದೆಹಲಿಯ ಆಂಧ್ರ ಭವನದ  ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.ಅಲ್ಲದೆ ವಿದೇಶಾಂಗ ವ್ಯವಹಾರ ಸಚಿವಾಲಯದೊಡನೆ ಸಂಪರ್ಕಿಸಿ ಅವರನ್ನು ಬಂಧಮುಕ್ತವಾಗಿಸಲು  ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment