ದೇಶ ವಿದೇಶ ರಾಜಕೀಯ ಸುದ್ದಿ

ಪಾಕಿಸ್ತಾನ ಸರ್ಕಾರದಲ್ಲಿ ಹಿಂದೂ ಸಚಿವ!

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿ ಶಾಹಿದ್‌ ಕಖಾನ್‌ ಅಬ್ಬಾಸಿ ಅವರು ಇತ್ತೀಚೆಗೆ ರಚಿಸಿದ ಹೊಸ ಸಚಿವ ಸಂಪುಟದಲ್ಲಿ ಸುಮಾರು ಎರಡು ದಶಕಗಳ ಬಳಿಕ ಹಿಂದೂವೊಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ.

65 ವರ್ಷದ ದರ್ಶನ್ ಲಾಲ್ ಎಂಬವರಿಗೆ ಪಾಕಿಸ್ತಾನದ 4 ಪ್ರಾಂತ್ಯಗಳ ಹೊಣೆಗಾರಿಕೆ ನೋಡಿಕೊಳ್ಳುವ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಲಾಲ್ ಅವರು ಸಿಂಧ್ ಜಿಲ್ಲೆಯ ಘೋಟ್ಕಿಯ ಮಿರ್ ಪುರ್ ಮಥೆಲೋ ನಗರದಲ್ಲಿ ವೈದ್ಯರಾಗಿ ಲಾಲ್ ಸೇವೆ ಸಲ್ಲಿಸುತ್ತಿದ್ದಾರೆ.

ಲಾಲ್ ಅವರು 2013ರಲ್ಲಿಯೂ ಪಿಎಂಎಲ್ ಎನ್ ಟಿಕೆಟ್ ಪಡೆದು ಅಲ್ಪಸಂಖ್ಯಾತರಿಗೆ ಮೀಸಲಾದ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಪ್ರವೇಶ ಪಡೆದಿದ್ದರು.

About the author

ಕನ್ನಡ ಟುಡೆ

Leave a Comment