ರಾಷ್ಟ್ರ ಸುದ್ದಿ

ಪಾಕ್​ಗೆ ತಕ್ಕ ತಿರುಗೇಟು ಕೊಡುವುದೇ ನಮ್ಮ ಗುರಿ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸರ್ಜಿಕಲ್ ಸ್ಟ್ರೈಕ್​ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ. ಸರ್ಜಿಕಲ್ ಸ್ಟ್ರೈಕ್ ಮಾಡಿದ ಯೋಧರಿಗೆ ಸಲಾಮ್. ನಾವು ಉಗ್ರರಿಗೆ ತಕ್ಕ ಪಾಠ ಕಲಿಸುತ್ತೇವೆ. ನಮ್ಮ ಸಶಸ್ತ್ರ ಪಡೆಗಳು ಶಾಂತಿಗಾಗಿ ಶ್ರಮಿಸುತ್ತಿವೆ. ಭಾರತದ ಧೋರಣೆ ಯಾವತ್ತೂ ಸೈನಿಕರ ಪರವಾಗಿರುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

48ನೇ ಆವೃತಿಯ ಮನ್​ ಕಿ ಬಾತ್​ನಲ್ಲಿ ಮಾತನಾಡಿ, ಪಾಕ್​ಗೆ ತಕ್ಕ ತಿರುಗೇಟು ಕೊಡುವುದೇ ನಮ್ಮ ಗುರಿ. ರಾಷ್ಟ್ರೀಯ ರಕ್ಷಣಾ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದರು. ಪರಾಕ್ರಮ ದಿವಸ್​ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿ ಹುತಾತ್ಮ ಯೋಧರನ್ನು ಸ್ಮರಿಸಿದರು. ಹಾಗೆಯೇ ಅ.2ರಂದು ಗಾಂಧಿ ಜಯಂತಿ ಪ್ರಯುಕ್ತ ಮಹಾತ್ಮ ಗಾಂಧಿಜಿ ಅವರನ್ನು ಸ್ಮರಿಸಿ, ಗಾಂಧಿ ಅವರ ಕೊಡುಗೆ ಮರೆಯಲಾಗದು. ಅವರ ಆದರ್ಶಗಳನ್ನು ಪಾಲಿಸಬೇಕಾಗಿದೆ. ಹಾಗಾಗಿಯೇ ಸ್ವಚ್ಛತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಜನರಿಗೋಸ್ಕರವೇ ಗಾಂಧಿ ಬದುಕಿದ್ದರು ಎಂದು ಗಾಂಧಿ ಅವರ ಸ್ಚಚ್ಛತೆ, ಗ್ರಾಮಾಭಿವೃದ್ಧಿಯ ಸ್ಮರಣೆ ಮಾಡಿದರು.

About the author

ಕನ್ನಡ ಟುಡೆ

Leave a Comment