ರಾಜ್ಯ ಸುದ್ದಿ

ಪಾಕ್‌ನಲ್ಲೇ ನೆಮ್ಮದಿ ಎಂದ ಸಿಧು ಮಾತಿಗೆ ಕಾಂಗ್ರೆಸ್‌ ಸಮರ್ಥನೆ ಇದೆಯೆ, ಬಿಎಸ್‌ವೈ ಪ್ರಶ್ನೆ

ಬೆಂಗಳೂರು: ಪಂಜಾಬ್‌ನ ಸಚಿವ ನಜೋತ್‌ ಸಿಂಗ್ ಸಿಧು ಅವರು ದಕ್ಷಿಣ ಭಾರತೀಯರ ಬಗ್ಗೆ ಅವಮಾನಕಾರಿ ಹೇಳಿಕೆ ಕುರಿತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ರಾಜ್ಯದ ಕಾಂಗ್ರೆಸ್‌ ಮುಖಂಡರು ತಮ್ಮ ನಿಲುವು ಸ್ಪಷ್ಟಪಡಿಸುವಂತೆ ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಆಗ್ರಹಿಸಿದ್ದಾರೆ.

ದಕ್ಷಿಣ ಭಾರತದ ವಿರುದ್ಧ ಹಾಗೂ ಪಾಕ್‌ ಪರ ಮಾತನಾಡಿರುವ ಕುರಿತು ಕಾಂಗ್ರೆಸ್‌ ಸಮರ್ಥಿಸಿಕೊಳ್ಳುತ್ತದೆಯೇ ಅಥವಾ ಖಂಡಿಸುತ್ತದೆಯೇ ಎಂದು ಸ್ಪಷ್ಟಪಡಿಸುವಂತೆ ಯಡಿಯೂರಪ್ಪ ಒತ್ತಾಯಿಸಿದ್ದಾರೆ. ದಕ್ಷಿಣ ಭಾರತಕ್ಕಿಂತ ಪಾಕಿಸ್ತಾನದಲ್ಲೇ ಹೆಚ್ಚು ನೆಮ್ಮದಿ ಎನ್ನುವ ಅರ್ಥದಲ್ಲಿ ಸಿದ್ದು ಮಾತನಾಡಿದ್ದಾರೆ. ಅವರ ಈ ಹೇಳಿಕೆ ದಕ್ಷಿಣ ಭಾರತದ ಎಲ್ಲ ಭಾಷಿಕರನ್ನೂ ಅವಮಾನಿಸಿದಂತಾಗಿದೆ. ಸಿದ್ದು ಅವರು ತಕ್ಷಣ ದಕ್ಷಿಣ ಭಾರತ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಭಾರತಕ್ಕಿಂತ ಪಾಕಿಸ್ತಾನ ಅವರಿಗೆ ಹೆಚ್ಚು ಪ್ರಿಯವಾಗಿದ್ದರೆ ಅಲ್ಲೇ ನೆಲಸಲಿ. ಈ ರೀತಿ ಹೇಳಿಕೆಗಳ ಮೂಲಕ ಭಾರತೀಯರಿಗೆ ಅವಮಾನಿಸುವುದು ಸಹಿಸಲಸಾಧ್ಯ. ಕಾಂಗ್ರೆಸ್‌ ಸೇರಿದ ಬಳಿಕ ಸಿಧು ಅವರು, ಆ ಪಕ್ಷದ ದಾಸ್ಯ ಮನೋಭಾವನೆಯನ್ನು ರೂಡಿಸಿಕೊಂಡಂತಿದೆ. ಕ್ರೀಡಾ ಮನೋಭಾವನೆ ಈಗ ಇಲ್ಲವಾಗಿದೆ. ಈ ವಿಚಾರವನ್ನು ಕಾಂಗ್ರೆಸ್‌ ನಾಯಕರು ಯಾವ ರೀತಿ ಪರಿಗಣಿಸುತ್ತಾರೆ? ಈ ಹೇಳಿಕೆಗೆ ಕಾಂಗ್ರೆಸ್‌ ನಾಯಕರ ನಿಲುವೇನು ಎಂಬುದನ್ನು ಹೇಳುವಂತೆ ಯಡಿಯೂರಪ್ಪ ಆಗ್ರಹಿಸಿದ್ದಾರೆ. ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾಗ ಅವರು ದಕ್ಷಿಣದ ಅನೇಕ ಭಾಗಗಳಿಗೆ ಆಗಮಿಸಿದ್ದರು. ಆ ಕರ್ನಾಟಕ ಸೇರಿ ಎಲ್ಲ ಭಾಗಗಳಲ್ಲೂ ಅವರಿಗೆ ಉತ್ತಮ ಪ್ರೋತ್ಸಾಹ, ಪ್ರೀತಿ-ವಿಶ್ವಾಸ ಸಿಕ್ಕಿದೆ. ಇದನ್ನೆಲ್ಲವನ್ನೂ ಅವರೀಗ ಮರೆತಿರುವುದು ಬೇಸರದ ಸಂಗತಿ ಎಂದು ಬಿಎಸ್‌ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

About the author

ಕನ್ನಡ ಟುಡೆ

Leave a Comment