ಕ್ರೀಡೆ

ಪಾಕ್‌ನ ಕಟ್ಟಾ ಅಭಿಮಾನಿ ಟೀಂ ಇಂಡಿಯಾ ಜೆರ್ಸಿ ತೊಟ್ಟ ಫೋಟೋ ವೈರಲ್

ಮುಂಬೈ: ಪಾಕಿಸ್ತಾನ ಕ್ರಿಕೆಟ್ ತಂಡದ ಕಟ್ಟಾ ಅಭಿಮಾನಿಯೊಬ್ಬರು ಏಷ್ಯಾ ಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದರು. ಪಾಕ್ ಕಟ್ಟಾ ಅಭಿಮಾನಿ ಬಶೀರ್ ಚಾಚಾ ಅವರು ಟೀಂ ಇಂಡಿಯಾ ಜೆರ್ಸಿ ತೊಟ್ಟಿದ್ದ ಕಾರಣ ಬಹಿರಂಗವಾಗಿದೆ. ಬಾಂಗ್ಲಾದೇಶದ ವಿರುದ್ಧದ ಏಷ್ಯಾಕಪ್ ಫೈನಲ್ ನಲ್ಲಿ ಪಾಕ್ ಅಭಿಮಾನಿ ಬಶೀರ್ ಟೀಂ ಇಂಡಿಯಾದ ಜೆರ್ಸಿ ತೊಟ್ಟು ರೋಹಿತ್ ಶರ್ಮಾ ಪಡೆಯನ್ನು ಬೆಂಬಲಿಸಿದ್ದರು. ಅಸಲಿಗೆ ಚಾಚಾ ಟೀಂ ಇಂಡಿಯಾ ಜೆರ್ಸಿ ತೊಡಲು ಕಾರಣವಾಗಿದ್ದು ಎಂಎಸ್ ಧೋನಿ. ಏಷ್ಯಾ ಕಪ್ ಫೈನಲ್ ಗೂ ಮೊದಲು ಧೋನಿ ಬಶೀರ್ ಚಾಚಾ ಹೋಟೆಲ್ ಕೊಠಡಿಗೆ ತೆರಳಿ ಟೀಂ ಇಂಡಿಯಾ ಜೆರ್ಸಿಯನ್ನು ಉಡುಗೊರೆಯಾಗಿ ಕೊಟ್ಟು ನಾಳಿನ ಪಂದ್ಯದಲ್ಲಿ ಇದನ್ನೇ ತೊಡುವಂತೆ ಹೇಳಿದ್ದರಂತೆ. ಅದೇ ಕಾರಣಕ್ಕೆ ಪಾಕ್ ಅಪ್ಪಟ ಅಭಿಮಾನಿ ಭಾರತೀಯ ಜೆರ್ಸಿಯಲ್ಲಿ ಮಿಂಚಿದ್ದರು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.

About the author

ಕನ್ನಡ ಟುಡೆ

Leave a Comment