ರಾಷ್ಟ್ರ ಸುದ್ದಿ

ಪಾಕ್‌ ನಲ್ಲಿ ಸಿಕ್ಕಿದ ಸ್ಟಫ್ಡ್‌ ಹಕ್ಕಿ ಉಡುಗೊರೆ: ನವಜೋತ್‌ ಸಿಂಗ್‌ ಸಿಧುಗೆ ಸಂಕಷ್ಟ

ಹೊಸದಿಲ್ಲಿ :  ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರಿಗೀಗ ಹೊಸ ಸಂಕಷ್ಟ ಎದುರಾಗಿದೆ. ಸಿಧು ಈಚೆಗೆ ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ  ಅವರಿಗೆ ಅಲ್ಲಿನ ಅವರ ಓರ್ವ ಅಭಿಮಾನಿ ಬ್ಲ್ಯಾಕ್‌ ಪ್ಯಾಟ್ರಿಜ್‌ ಎಂಬ ಕಪ್ಪು ಬಣ್ಣದ ಸ್ಟಫ್ಡ್‌ ಕ್ರೀಡಾ ಹಕ್ಕಿಯನ್ನು ಉಡುಗೊರೆಯಾಗಿ ನೀಡಿದ್ದ. ಅಂತೆಯೇ ಸಿಧು ಅವರು ತಮ್ಮ ಈ ಉಡುಗೊರೆಯನ್ನು  ತಮ್ಮೊಡನೆ ಭಾರತಕ್ಕೆ ತಂದಿದ್ದರು.

ಸಿಧು ಅವರ ಈ ಕೃತ್ಯವು 1972ರ ವನ್ಯಮೃಗ ರಕ್ಷಣೆ ಕಾಯಿದೆಯಡಿ ಅಪರಾಧವಾಗಿದೆ ಎಂದು ಆರೋಪಿಸಿ ಸಂದೀಪ್‌ ಜೈನ್‌ ಎಂಬವರು ವನ್ಯಮೃಗಗಳ ಮೇಲಿನ ಅಪರಾಧ ನಿಯಂತ್ರಣ ಸಂಸ್ಥೆಗೆ ದೂರು ನೀಡಿ ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಅಂತೆಯೇ ಈಗಿನ್ನು ಸಿಧು ಅವರು ಈ ವಿಷಯದಲ್ಲಿ ತನಿಖೆ ಎದುರಿಸಬೇಕಾದ ಸ್ಥಿತಿ ಒದಗಿದೆ ಎಂದು ವರದಿಗಳು ತಿಳಿಸಿವೆ.

 

About the author

ಕನ್ನಡ ಟುಡೆ

Leave a Comment