ಅ೦ತರಾಷ್ಟ್ರೀಯ

ಪಾಕ್ ಐಎಸ್ಐ ನೂತನ ಮುಖ್ಯಸ್ಥಾಗಿ ಲೆ.ಜ. ಅಸೀಮ್ ಮುನಿರ್ ನೇಮಕ

ಇಸ್ಲಾಮಾಬಾದ್: ಲೆಫ್ಟಿನೆಂಟ್ ಜನರಲ್ ಅಸೀಮ್ ಮುನಿರ್ ಪಾಕಿಸ್ತಾನದ ಪ್ರಬಲ ಗೂಢಚಾರ ಸಂಸ್ಥೆ ಐಎಸ್ಐ ನ ನೂತನ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ ಎಂದು ಪಾಕ್ ಸೇನಾ ಮಾದ್ಯಮ ವಿಭಾಗ ಹೇಳಿದೆ. ಹಿಂದೆ ಮಿಲಿಟರಿ ಗುಪ್ತಚರ (ಎಂಐ) ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಮುನಿರ್ ಇತ್ತೀಚೆಗೆ ಲೆಫ್ಟಿನೆಂಟ್ ಜನರಲ್ ಶ್ರೇಣಿಗೆ ಭಡ್ತಿ ಹೊಂದಿದ್ದರು.ಸೇನಾ ಮುಖ್ಯಸ್ಥರಾದ ಜನರಲ್ ಖಮರ್ ಜಾವೇದ್ ಭಾಜ್ವಾನೇತೃತ್ವದ ಆರ್ಮಿ ಪ್ರಮೋಷನ್ ಮಂಡಳಿ ಮುನಿರ್ ಅವರ ಭಡ್ತಿಗೆ ಸಮ್ಮತಿಸಿತ್ತು. ಲೆಫ್ಟಿನೆಂಟ್ ಜನರಲ್ ನವೀದ್ ಮುಖ್ತಾರ್ ಅವರಿಂದ ತೆರವಾದ ಸ್ಥಾನಕ್ಕೆ ಮುನಿರ್ ನೇಮಕವಾಗಿದ್ದಾರೆ. ಮುಖ್ತಾರ್ ಡಿಸೆಂಬರ್ 2016 ರಲ್ಲಿ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಡೈರೆಕ್ಟರ್ ಜನರಲ್ ಕಛೇರಿ ಆಡಳಿತ ವಹಿಸಿಕೊಂಡಿದ್ದರು. ಇದಕ್ಕೆ ಮುನ್ನ ಮುನಿರ್ ಉತ್ತರ ಭಾಗಗಳ ಫೋರ್ಸ್ ಕಮಾಡರ್ ಆಗಿ ಸೇವೆ ಸಲ್ಲಿಸಿದ್ದರು.

About the author

ಕನ್ನಡ ಟುಡೆ

Leave a Comment