ದೇಶ ವಿದೇಶ

ಪಾಕ್ ಬೆಂಬಲಿಸಿದ ಚೀನಾ

ಲಂಡನ್‌‌ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ನೆರೆ ರಾಷ್ಟ್ರ ಪಾಕಿಸ್ತಾನವನ್ನು ಭಯೋತ್ಪಾದಕರನ್ನು ರಫ್ತು ಮಾಡುವ ಕಾರ್ಖಾನೆ ಎಂದು ಟೀಕಿಸಿದ್ದಕ್ಕಾಗಿ ಚೀನಾ ಪಾಕಿಸ್ತಾನ ಬೆಂಬಲಕ್ಕೆ ನಿಂತಿದೆ.ಲಂಡನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನವನ್ನು ಭಯೋತ್ಪಾದಕರನ್ನು ರಫ್ತು ಮಾಡುವ ಕಾರ್ಖಾನೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಭಾರತ ಭಯೋತ್ಪಾದನೆಯ ರಫ್ತನ್ನು ಸಹಿಸುವುದಿಲ್ಲ ಎಂದಿದ್ದರು. ಭಯೋತ್ಪಾದಕರ ರಫ್ತು ಮಾಡುವವರು ನೇರವಾಗಿ ಯುದ್ಧ ಮಾಡಲು ಸಾಮರ್ಥ್ಯ ಹೊಂದಿರುವುದಿಲ್ಲ. ಆದ್ದರಿಂದ ಹಿಂಬದಿಯಿಂದ ದಾಳಿ ನಡೆಸಲು ಯತ್ನಿಸುತ್ತಾರೆ. ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡುವುದಕ್ಕೆ ನಮಗೆ ತಿಳಿದಿದೆ ಎಂದು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದರು.ಈ ಬಗ್ಗೆ ಕೇಳಿದ ಮಾತನಾಡಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರ, ಭಯೋತ್ಪಾದನೆ ಎಂಬ ಶತ್ರುವನ್ನು ಎಲ್ಲರೂ ಎದುರಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯ ಭಯೋತ್ಪಾದನೆ ವಿರುದ್ಧ ಹೋರಾಡಬೇಕು ಎಂದು ಹೇಳಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವುದಕ್ಕೆ ಅಂತಾರಾಷ್ಟ್ರೀಯ ಸಮುದಾಯವೂ ಬೆಂಬಲಿಸಬೇಕು ಎಂದು ಚೀನಾ ಪಾಕ್ ಬೆಂಬಲಕ್ಕೆ ನಿಂತಿದೆ.

About the author

ಕನ್ನಡ ಟುಡೆ

Leave a Comment