ರಾಷ್ಟ್ರ ಸುದ್ದಿ

ಪಾಕ್ ವಶದಲ್ಲಿ ಭಾರತೀಯ ಯೋಧ ಅಭಿನಂದನ್: ಏನಿದು ಜಿನಿವಾ ಒಪ್ಪಂದ

ನವದೆಹಲಿ: ಭಾರತೀಯ ವಾಯುಸೇನೆ ಯೋಧ ಅಭಿನಂದನ್ ರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದ ಬೆನ್ನಲ್ಲೇ ಭಾರತೀಯ ವಿದೇಶಾಂಗ ಇಲಾಖೆ ಜಿನಿವಾ ಒಪ್ಪಂದದ ಅನ್ವಯ ಅವರನ್ನು ಬಿಡುಗಡೆ ಮಾಡುವಂತೆ ಕೇಳಿದೆ. ಇಷ್ಟಕ್ಕೂ ಏನಿದು ಜಿನಿವಾ ಒಪ್ಪಂದ.. ಇಲ್ಲಿದೆ ಮಾಹಿತಿ.

ಜಿನೀವಾ ಒಪ್ಪಂದದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಂದು ಭಾರಿ ಚರ್ಚೆ ನಡೆಯುತ್ತಿದೆ. ಅದರಲ್ಲೂ ಭಾರತೀಯ ಪೈಲೆಟ್ ಅಭಿನಂದನ್ ಪಾಕಿಸ್ತಾನದ ವಶದಲ್ಲಿದ್ದಾರೆ ಎಂಬ ವಿಚಾರ ತಿಳಿದ ಬಳಿಕ ಹೆಚ್ಚಿನ ಚರ್ಚೆಗಳು ಆರಂಭವಾಗಿವೆ. ಯುದ್ಧದ ಸನ್ನಿವೇಶದಲ್ಲಿ ಸೈನಿಕರನ್ನು ಮತ್ತು ಜನರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಜಿನೀವಾ ಒಪ್ಪಂದ ಹಲವು ಮಾರ್ಗಸೂಚಿಗಳನ್ನು ಒಳಗೊಂಡಿದೆ. ಎರಡನೇ ಮಹಾಯುದ್ಧದ ಬಳಿಕ 1949ರಲ್ಲಿ 196 ದೇಶಗಳ ನಡುವೆ ಏರ್ಪಟ್ಟ ವೇಳೆ ಒಪ್ಪಂದ ನಡೆದಿತ್ತು. ಈ ಒಪ್ಪಂದ ಪ್ರಕಾರ ಯುದ್ಧ ಕೈದಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು. ಗಾಯಗೊಂಡ, ಅನಾರೋಗ್ಯಕ್ಕೆ ತುತ್ತಾದ ಯುದ್ಧ ಕೈದಿಗಳಿಗೆ ಚಿಕಿತ್ಸೆ ನೀಡಬೇಕು.

ಜಿನೀವಾ ಒಪ್ಪಂದ ಆರ್ಟಿಕಲ್ 3 ಅಘೋಷಿತ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ. ಯುದ್ಧ ಕೈದಿಯ ಕೊಲೆ, ಹಲ್ಲೆ, ಶಿರಚ್ಛೇದ, ಒತ್ತೆಯಂತಹ ಕೃತ್ಯಗಳನ್ನು ಮಾಡಬಾರದು. ಕಾನೂನು ಪ್ರಕ್ರಿಯೆಗಳನ್ನು ಮಾಡದೇ, ಆರೋಪ ಸಾಬೀತಾಗದೇ ಶಿಕ್ಷೆ ನೀಡಬಾರದು. ಆರೋಪ ಸಾಬೀತಾಗದೇ ಇದ್ದಲ್ಲಿ ಯುದ್ಧ ಕೈದಿಯನ್ನು ಅವರ ದೇಶಕ್ಕೆ ಒಪ್ಪಿಸಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ. 1949ರ 2ನೇ ಮಹಾಯುದ್ಧದ ಸಂದರ್ಭದಲ್ಲಿ ಜಿನೀವಾ ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ಇವುಗಳಲ್ಲಿ ಪ್ರಮುಖವಾದ ನಾಲ್ಕು ಮಾರ್ಗಸೂಚಿಗಳನ್ನು ದೇಶಗಳು ಪಾಲಿಸಬೇಕಾಗಿದೆ.

3 ತಿದ್ದುಪಡಿ: 1949ರಲ್ಲಿ ನಡೆದ ಒಪ್ಫಂದಕ್ಕೆ ಮೂರು ಪ್ರಮುಖ ತಿದ್ದುಪಡಿಗಳನ್ನು ತರಲಾಗಿದೆ. ಈ ಶಿಷ್ಟಚಾರಗಳನ್ನು ಪಾಲನೆ ಮಾಡಬೇಕು ಎಂದು ತಿದ್ದುಪಡಿ ಹೇಳುತ್ತದೆ.
ಶಿಷ್ಟಾಚಾರ 1 (1977) : ಶಿಷ್ಟಾಚಾರ 1 ಅಂತರಾಷ್ಟ್ರೀಯ ಶಸ್ತ್ರ ಸಂಘರ್ಷಕ್ಕೆ ಒಳಪಟ್ಟಿದ್ದು.
ಶಿಷ್ಟಾಚಾರ 2 (1977) : ಶಿಷ್ಟಾಚಾರ 2 ಅಂತರಾಷ್ಟ್ರೀಯ ವಲ್ಲದ ಶಸ್ತ್ರ ಸಂಘರ್ಷಕ್ಕೆ ಒಳಪಟ್ಟಿದೆ.
ಶಿಷ್ಟಾಚಾರ 3 (2005) : ಶಿಷ್ಟಾಚಾರ 3 ವಿಶಿಷ್ಟ ಗುರುತಿನ ಲಾಂಚನವನ್ನು ಒಳಪಡಿಸಿಕೊಳ್ಳುವ ಬಗ್ಗೆ ಇದೆ.
196 ರಾಷ್ಟ್ರಗಳು 1949ರ ಒಪ್ಪಂದಕ್ಕೆ ಸಹಿ ಹಾಕಿವೆ. 2010ರಲ್ಲಿ 170 ರಾಷ್ಟ್ರಗಳು ಶಿಷ್ಟಾಚಾರ 1 ಮತ್ತು 165 ರಾಷ್ಟ್ರಗಳು ಶಿಷ್ಟಾಚಾರ 2ಕ್ಕೆ ಒಪ್ಪಿಗೆ ನೀಡಿವೆ.
ಒಪ್ಪಂದದ ಪ್ರಮುಖ ಅಂಶಗಳು ಇಂತಿವೆ. ಗಾಯಗೊಂಡ ಸೈನಿಕರಿಗೆ ಸಂಬಂಧಿಸಿದೆ. ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಸೈನಿಕನಿಗೆ ಧರ್ಮ, ಬಣ್ಣ, ಲಿಂಗ ಬೇಧವಿಲ್ಲದೇ ಚಿಕಿತ್ಸೆ ನೀಡಬೇಕು. ಸೆರೆ ಸಿಕ್ಕ ಸೈನಿಕರನ್ನು ಹಿಂಸೆ ಮಾಡುವುದು ಹತ್ಯೆ ಮಾಡುವುದನ್ನು ನಿಷೇಧಿಸಿದೆ. ಈ ಅಂಶದ ಪ್ರಕಾರ ನೌಕಾಪಡೆಯ ಹಡಗು ಮುಳುಗಡೆಯಾದರೆ ಸೈನಿಕರ ರಕ್ಷಣೆ ಬಗ್ಗೆ ಇದೆ. ವಿಮಾನ ಪತನವಾದಾಗಲೂ ನಿಯಮ ಪಾಲನೆ ಮಾಡಬೇಕು ಎಂದಿದೆ. ಹಡಗಿನಲ್ಲಿರುವ ಆಸ್ಪತ್ರೆಗಳಿಗೆ ವಿಶೇಷ ರಕ್ಷಣೆ ನೀಡಬೇಕು ಎಂದು ಹೇಳಿದೆ.
ಯುದ್ಧದ ಸಂದರ್ಭದಲ್ಲಿ ಸೆರೆ ಸಿಕ್ಕ ಖೈದಿಯ ಬಗ್ಗೆ 3ನೇ ಅಂಶ ಒಳಗೊಂಡಿದೆ. ಖೈದಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಕೈದಿಯ ಹೆಸರು, ಹುದ್ದೆ, ಸೀರಿಯಲ್ ನಂಬರ್‌ಗಳನ್ನು ಎದುರಾಳಿಗಳ ಜೊತೆ ಹಂಚಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಅವರನ್ನು ಹಿಂಸೆ ಮಾಡುವಂತಿಲ್ಲ. ಒಪ್ಪಂದದ ಅಂಶ 4 : ಯುದ್ಧದ ಸಂದರ್ಭದಲ್ಲಿ ಜನರು ಸೆರೆ ಸಿಕ್ಕರೆ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವಂತಿಲ್ಲ.

About the author

ಕನ್ನಡ ಟುಡೆ

Leave a Comment