ರಾಷ್ಟ್ರ ಸುದ್ದಿ

ಪಾಕ್ ವಿರುದ್ಧ ಜಲಾಸ್ತ್ರ ಪ್ರಯೋಗ, ನೆರೆರಾಷ್ಟ್ರಕ್ಕೆ ಹರಿವ ನೀರನ್ನು ಯಮುನೆಯತ್ತ ತಿರುಗಿಸುತ್ತೇವೆ ಎಂದ ನಿತಿನ್ ಗಡ್ಕರಿ

ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ಗುರುವಾರ ಉಗ್ರರು ನಡೆಸಿದ ಭೀಕರ ಭಯೋತ್ಪಾದಕ ದಾಳಿ ಬಳಿಕ ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಭಾರತ ಪಾಕ್ ವಿರುದ್ಧ ಜಲಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ಹರಿಯುತ್ತಿರುವ ಮೂರು ನದಿಗಳ ನೀರನ್ನು ನಿಲ್ಲಿಸಿ ಅದನ್ನು ಯಮುನಾ ನದಿಗೆ ಸೇರುವಂತೆ ತಿರುಗಿಸುವ ಸಂಬಂಧ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಇಷ್ಟೇ ಅಲ್ಲದೆ 1960ರಿಂದ ಚಾಲ್ತಿಯಲ್ಲಿರುವ ಸಿಂಧು ನದಿ ಒಪ್ಪಂದ ಮರುಪರಿಶೀಲನೆ ನಡೆಸಲಾಗುವುದು ಎಂದೂ ಗಡ್ಕರಿ ಹೇಳಿದ್ದಾರೆ. ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಗಡ್ಕರಿ “ಪಾಕಿಸ್ತಾನಕ್ಕೆ ಹರಿಯ್ತುತ್ತಿರುವ ಮೂರು ನದಿಗಳ ನಿರು ನಿಲ್ಲಿಸಿ ಅದನ್ನು ಯಮುನೆಗೆ ಹರಿಯುವಂತೆ ಮಾಡುವ ಯೋಜನೆ ಇದೆ. ಹಾಗೆ ಮಾಡಿದ್ದಾದರೆ ಯಮುನೆಯಲ್ಲಿ ವರ್ಷಪೂರ್ತಿ ಸಾಕಷ್ಟು ಪ್ರಮಾಣದ ನೀರು ಇರಲಿದೆ” ಎಂದಿದ್ದಾರೆ. ಈ ಮೂಲಕ ಪುಲ್ವಾಮಾ ದಾಳಿಯ ಬಳಿಕ ಪಾಕ್ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವುದನ್ನು ನಿಲ್ಲಿಸದೆ ಹೋದರೆ ಘೋರ ಪರಿಣಾಮ ಎದುರಿಸಬೇಕು ಎಂದು ಪರೋಕ್ಷಆಗಿ ಎಚ್ಚರಿಕೆ ನೀಡಿದ್ದಾರೆ. ಫೆ.14ರಂದು ಪುಲ್ವಾಮಾ ಉಗ್ರ ದಾಳಿಯ ವೇಳೆ ನಲವತ್ತಕ್ಕೆ ಹೆಚ್ಚು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ಬಳಿಕ ಭಾರತ ಪಾಕಿಸ್ತಾನಕ್ಕೆ ನೀಡಿದ್ದ “ವಿಶೇಷ ಆಪ್ತ ರಾಷ್ಟ್ರ” ಸ್ಥಾನಮಾನ ಹಿಂಪಡೆದಿದ್ದಲ್ಲದೆ ಪಾಕ್ ನಿಂದ ಆಮದಾಗುವ ವಸ್ತುಗಳ ಮೇಲೆ ಆಮದು ಸುಂಕವನ್ನು ಶೇ. 200ಕ್ಕೆ ಏರಿಸಲಾಗಿತ್ತು.

About the author

ಕನ್ನಡ ಟುಡೆ

Leave a Comment