ರಾಜ್ಯ ಸುದ್ದಿ

ವಿಷ ಪ್ರಸಾದ ದುರಂತ: ಪಾಪಿಗಳ ಘೋರ ಕೃತ್ಯಕ್ಕೆ ಭಕ್ತರಷ್ಟೇ ಅಲ್ಲ, 60 ಕಾಗೆಗಳ ಸಾವು

ಚಾಮರಾಜನಗರ: ಹನೂರು ತಾಲೂಕಿನ ಸುಲ್ವಾಡಿ ಮಾರ್ಟಳ್ಳಿಯ ಮಾರಮ್ಮ ದೇವಾಲಯದ ವಿಷಾಹಾರ ಸೇವನೆ ಪ್ರಕರಣದಲ್ಲಿ ಕೇವಲ ಭಕ್ತರಷ್ಟೇ ಅಲ್ಲ ಅಲ್ಲಿನ ಸುಮಾರು 60 ಕಾಗೆಗಳೂ ಸಹ ಸಾವನ್ನಪ್ಪಿವೆ.
ದೇಗುಲದ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ ಭಕ್ತರಿಗೆ ಮಾಡಲಾಗಿದ್ದ ಪ್ರಸಾದದ ಉಳಿಕೆ ಶೇಷ ಪದಾರ್ಥವನ್ನು ಕಸದ ಬುಟ್ಟಿಗೆ ಎಸೆಯಲಾಗಿತ್ತು. ಈ ವೇಳೆ ಕಸದಲ್ಲಿದ್ದ ಉಳಿಕೆ ಆಹಾರವನ್ನು ತಿಂದಿದ್ದ ಅಲ್ಲಿನ ಸುಮಾರು 60 ಕಾಗೆಗಳೂ ಕೂಡ ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ದೇಗುಲಕ್ಕೆ ಆಗಮಿಸಿದ್ದ ಭಕ್ತರಿಗೆ ಟೊಮ್ಯಾಟೋ ಬಾತ್ ಮಾಡಿಸಲಾಗಿತ್ತು. ಈ ವೇಳೆ ಆಹಾರ ಸೇವಿಸಿದ 18 ಮಂದಿ ಮೃತಪಟ್ಟಿದ್ದಾರೆ. 70ಕ್ಕೂ ಹೆಚ್ಚು ಅಸ್ವಸ್ಥಗೊಂಡಿದ್ದವರನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ದೇವಸ್ಥಾನದ ಬಡಿಸಲಾದ ಆಹಾರದಲ್ಲಿ ಕೀಟನಾಶಕ ಬೆರೆಸಲಾಗಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಕೆಲವರು ಪ್ರಸಾದವನ್ನು ಅಲ್ಲಿಯೇ ಸೇವಿಸಿದರೆ, ಕೆಲವರು ಮನೆಗೆ ಕೊಂಡೊಯ್ದಿದ್ದರು. ಆದರೆ ಪ್ರಸಾದ ಸೇವಿಸಿದ ಕೆಲ ಹೊತ್ತಿನಲ್ಲೇ ಒಬ್ಬರಾದ ನಂತರ ಒಬ್ಬರು ಎಂಬಂತೆ ಈ ವರೆಗೂ 18 ಜನ ಮೃತರಾದರೆ ನೂರಕ್ಕೂ ಹೆಚ್ಚು ಜನ ಜೀವನ್ಮರಣ ಹೋರಾಟದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದುರ್ಘಟನೆಗೆ ಇಡೀ ದೇಶ ಕಂಬನಿ ಮಿಡಿದಿದೆ.

About the author

ಕನ್ನಡ ಟುಡೆ

Leave a Comment