ಕ್ರೈಂ

ಪಾರ್ಟಿಗೆ ಹೋಗೊದು ಬೇಡ ಎಂದ ತಾಯಿ ಮಾತಿನಿಂದ ಬೇಸತ್ತ ಮಗಳು ಆತ್ಮಹತ್ಯೆ

ಬೆಂಗಳೂರು : ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಳ್ಳಲು ತಾಯಿ ನಿರಾಕರಿಸಿದ ಹಿನ್ನೆಲೆಯಲ್ಲಿ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಂಪೇಗೌಡ ನಗರದಲ್ಲಿ ನಡೆದಿದೆ.ಅರ್ಪಿತಾ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.

ತನ್ನ ಸ್ನೇಹಿತೆಯ ಹುಟ್ಟುಹಬ್ಬವೊಂದರಲ್ಲಿ ಪಾಲ್ಗೊಳ್ಳಬೇಕೆಂದು ಅರ್ಪಿತಾ ತಾಯಿ ಚಂದ್ರಿಕಾ ಅವರನ್ನು ಕೇಳಿದ್ದಾಳೆ. ಆದರೆ ಚಂದ್ರಿಕಾ ಹುಟ್ಟುಹಬ್ಬಕ್ಕೆ ಹೋಗುದು ಬೇಡ ಪರೀಕ್ಷೆಗೆ ತಯಾರಾಗು ಎಂದು ಸಲಹೆ ನೀಡಿದ್ದಾರೆ.  ಇದರಿಂದ ಬೇಸತ್ತ  ಅರ್ಪಿತಾ  ಮನೆಯ ಮೊದಲ ಮಹಡಿಯಲ್ಲಿರುವ  ಕೊಠಡಿಗೆ ಹೋಗನೇಣುಬಿಗಿದುಕೊಂಡಿದ್ದಾಳೆ.

ಈಕೆಯ ತಾಯಿ  ಹೋಗಿ ಪರಿಶೀಲನೆ ನಡೆಸಲಾಗಿದ್ದು ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ. ನಂತರ ಬಾಗಿಲು ಒಡೆದು ನೋಡಿದ್ದಾಗ ಆಕೆ ನೇಣುಬಿಗಿದುಕೊಂಡಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಬದುಕುಳಿಯಲಿಲ್ಲ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ನಂಜಪ್ಪ ಲೇಔಟ್ ನಿವಾಸಿಯಾದ ಈಕೆ  ಬನಶಂಕರಿಯ ಖಾಸಗಿ ಕಾಲೇಜ್ ವೊಂದರಲ್ಲಿ  ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

 

 

About the author

ಕನ್ನಡ ಟುಡೆ

Leave a Comment