ಆಹಾರ

ಪಾವ್ ಬಾಜಿ ದೋಸೆ ರೆಸಿಪಿ

ಬೇಕಾಗುವ ಪದಾರ್ಥಗಳು
 • ದೋಸೆ ಹಿಟ್ಟು- 1 ಬಟ್ಟಲು
 • ಈರುಳ್ಳಿ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
 • ಟೊಮೆಟೋ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
 • ಎಣ್ಣೆ – ಅಗತ್ಯಕ್ಕನುಗುಣವಾಗಿ
 • ಕ್ಯಾಪ್ಸಿಕಂ- ಸಣ್ಣಗೆ ಹೆಚ್ಚಿದ್ದು ಸ್ವಲ್ಪ
 • ಬೆಣ್ಣೆ – ಸ್ವಲ್ಪ
 • ಆಲೂಗಡ್ಡೆ- ಬೇಯಿಸಿ, ಸಿಪ್ಪೆತೆಗೆದು ನುಣ್ಣಗೆ ಮಾಡಿದ್ದು
 • ಬಟಾಣಿ- ಬೇಯಿಸಿದ್ದು
 • ಟೊಮೆಟೋ ಸಾಸ್ – ಸ್ವಲ್ಪ
 • ತೆಂಗಿನ ಚಟ್ನಿ-ಸ್ವಲ್ಪ
 • ಚಿಲ್ಲಿ ಸಾಸ್ – 1 ಚಮಚ
 • ಪಾವ್ ಬಾಜಿ ಮಸಾಲೆ ಪುಡಿ – 1 ಚಮಚ
 • ಉಪ್ಪು – ರುಚಿಗೆ ತಕ್ಕಷ್ಟು
 • ಕೊತ್ತಂಬರಿ ಸೊಪ್ಪು- ಸ್ವಲ್ಪ
 
ಮಾಡುವ ವಿಧಾನ…
 • ಒಲೆಯ ಮೇಲೆ ತವಾ ಇಡಬೇಕು. ತವಾ ಕಾದ ನಂತರ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಹರಡಿ, ನಂತರ ಸ್ವಲ್ಪ ನೀರು ಹಾಗಿ ಒರೆಸಬೇಕು.
 • ನಂತರ ಹಿಟ್ಟು ಹಾಕಿ ದೋಸೆಯಾಕಾರದಲ್ಲಿ ಹಾಕಬೇಕು. ಬಳಿಕ ದೋಸೆಯ ಮೇಲೆ ಈರುಳ್ಳಿ, ಟೊಮೆಟೋ, ಕ್ಯಾಪ್ಸಿಕಂ, ಬೇಯಿಸಿದ ಆಲೂ, ಬಟಾಣಿ, ಟೊಮೆಟೋ ಸಾಸ್, ತೆಂಗಿನ ಕಾಯಿ ಚಟ್ನಿ, ಚಿಲ್ಲಿ ಸಾಸ್, ಪಾವ್ ಬಾಜಿ ಮಸಾಲಾ ಪುಡಿ, ಉಪ್ಪು, ಬೆಣ್ಣೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
 • ಈ ಮಸಾಲೆಯನ್ನು ದೋಸೆಯ ಸುತ್ತಲೂ ಹರಡಿ, ಚಿನ್ನದ ಬಣ್ಣ ಬರುವವರೆಗೂ ಸುಡಬೇಕು. ಕೊನೆಯಲ್ಲಿ ಮತ್ತೆ ಸ್ವಲ್ಪ ಈರುಳ್ಳಿ ಹಾಗೂ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ ತೆಗೆದರೆ, ರುಚಿಕರವಾದ ಪಾವ್ ಬಾಜಿ ದೋಸೆ ಸವಿಯಲು ಸಿದ್ಧ.

About the author

ಕನ್ನಡ ಟುಡೆ

Leave a Comment