ರಾಜ್ಯ ಸುದ್ದಿ

ಪಾಸ್ ಇರೋ ವಿದ್ಯಾರ್ಥಿಗಳನ್ನು ಹತ್ತಿಸದ ಬಸ್ ಚಾಲಕ, ನಿರ್ವಾಹಕರಿಗೆ ಶಾಸಕಿಯಿಂದ ತರಾಟೆ

ಬೆಳಗಾವಿ: ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಜನೋಪಯೋಗಿ ಕೆಲಸಗಳನ್ನು ಧಾರಾಳವಾಗಿ ಮಾಡಬಹುದು ಎಂಬುದಕ್ಕೆ ಈ ಘಟನೆ ನಿದರ್ಶನ. ಬೆಳಗಾವಿಯ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್, ಬಸ್ ಪಾಸ್ ಇರುವ ವಿದ್ಯಾರ್ಥಿಗಳನ್ನು ಹತ್ತಿಸದೇ ಸತಾಯಿಸುತ್ತಿದ್ದ ಸರ್ಕಾರಿ ಬಸ್ ಕಂಡಕ್ಟರ್ ನ್ನು ತರಾಟೆಗೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದಾರೆ. ಸಾಮಾನ್ಯವಾಗಿ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಸ್ಥಳದಲ್ಲಿ ಬಸ್ ನಿಲ್ಲಿಸದೆ ಹೋಗುವುದು, ಬಸ್ಸಿನಲ್ಲಿ ವಿದ್ಯಾರ್ಥಿಗಳನ್ನು ಸತಾಯಿಸುವುದು ಇತ್ಯಾದಿ ದೂರುಗಳನ್ನು ನಾವು ಅಲ್ಲಲ್ಲಿ ಕೇಳುತ್ತೇವೆ. ಇಂತವರಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ತರಾಟೆಗೆ ತೆಗೆದುಕೊಂಡರು. ಈ ಘಟನೆ ಖಾನಾಪುರದ ಬಳಿ ನಡೆದಿದ್ದು, ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳು ಹತ್ತಿದರೆ ಜನಜಂಗುಳಿ ಬಸ್ಸಿನಲ್ಲಿ ಜಾಸ್ತಿಯಾಗುತ್ತದೆ, ಬೇರೆ ಹಣ ಕೊಟ್ಟು ಬರುವ ಪ್ರಯಾಣಿಕರನ್ನು ಹತ್ತಿಸೋಕೆ ಆಗುವುದಿಲ್ಲ. ಬೇರೆ ಪ್ರಯಾಣಿಕರು ಹತ್ತದೆ ಇದ್ದರೆ ಹಣ ಬರುವುದಿಲ್ಲ ಎಂದು ಹೇಳಿ ವಿದ್ಯಾರ್ಥಿಗಳನ್ನು ಬಸ್ ಹತ್ತಿಸದೇ ಕಂಡಕ್ಟರ್ ಸತ್ತಾಯಿಸುತ್ತಿದ್ದರು.

ಮೊನ್ನೆ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೆ ಖಾಲಿ ಹೋಗುತ್ತಿದ್ದ ಮೂರು ಬಸ್ಸುಗಳನ್ನು ಖಾನಾಪುರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಹಿಂಬಾಲಿಸಿದ್ದಾರೆ. ಬಸ್ ಖಾಲಿ ಇದ್ದರೂ ವಿದ್ಯಾರ್ಥಿಗಳನ್ನ ಯಾಕೆ ಹತ್ತಿಸಿಲ್ಲ. ವಿದ್ಯಾರ್ಥಿಗಳು ಬಸ್ ಹತ್ತಿದರೆ ಕಷ್ಟ ಆಗುತ್ತೆ ಅಂತ ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ತೊಂದರೆ ನೀಡುವುದು ಎಷ್ಟು ಸರಿ ಎಂದು ಚಾಲಕ, ನಿರ್ವಾಹಕರನ್ನು ಬಸ್ಸಿನಿಂದ ಕೆಳಗಿಳಿಸಿ ಶಾಸಕಿ ಪ್ರಶ್ನಿಸಿದ್ದಾರೆ. ಇನ್ನೊಮ್ಮೆ ಈ ರೀತಿ ವರ್ತಿಸಿದರೆ ನಿಮ್ಮನ್ನು ಸೇವೆಯಿಂದ ಅಮಾನತು ಮಾಡಿಸುತ್ತೇನೆ ಎಂದು ಬಸ್ಸಿನ ಚಾಲಕ ಮತ್ತು ನಿರ್ವಾಹಕರಿಗೆ ಅಂಜಲಿ ನಿಂಬಾಳ್ಕರ್ ಎಚ್ಚರಿಕೆ ಸಹ ನೀಡಿದರು.

About the author

ಕನ್ನಡ ಟುಡೆ

Leave a Comment