ದೇಶ ವಿದೇಶ

ಪಿಆರ್‌ಆರ್‌ಎಸ್‌ ಮತ್ತು ಹಂದಿ ಜ್ವರ ಕಾಯಿಲೆಗೆ ಕನಿಷ್ಠ 1,348  ಹಂದಿಗಳು ಸಾವು

ಐಜಾಲ್‌ : ಮಿಜೋರಾಂ ನಲ್ಲಿ ಕಳೆದ ಕೆಲವು ವಾರಗಳಲ್ಲಿ ಪಿಆರ್‌ಆರ್‌ಎಸ್‌ ಮತ್ತು ಹಂದಿ ಜ್ವರ ಕಾಯಿಲೆಗೆ ಕನಿಷ್ಠ 1,348  ಹಂದಿಗಳು ಹಾಗೂ ಹಂದಿ ಮರಿಗಳು ಸತ್ತಿರುವುದಾಗಿ ಸರಕಾರಿ ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಕಳೆದ ಗುರುವಾರದ ವರೆಗೆ ಲಭ್ಯವಿದ್ದ ಅಂಕಿ ಅಂಶಗಳಿಂದ ಈ ಸಂಖ್ಯೆಯನ್ನು ಅಂದಾಜಿಸಲಾಗಿದೆ ಎಂದು ಪಶು ಸಂಗೋಪನೆ ಇಲಾಖೆಯ ಜಂಟಿ ನಿರ್ದೇಶಕ ಡಾ. ಹಮರ್‌ಕುಂಗ ತಿಳಿಸಿದ್ದಾರೆ. ಸುಮಾರು 2,613 ಹಂದಿಗಳು ಮತ್ತು ಹಂದಿ ಮರಿಗಳಿಕೆ ಕಾಯಿಲೆಯ ಸೋಂಕು ತಗಲಿದೆ. 81 ಗ್ರಾಮಗಳಲ್ಲಿ ಈ ಕಾಯಿಲೆ ವ್ಯಾಪಿಸಿದೆ. ಹಂದಿಗಳ ಈ ಕಾಯಿಲೆಗೆ ಯಾವುದೇ ವ್ಯಾಕ್ಸಿನ್‌ ಇಲ್ಲ; ಆದುದರಿಂದ ಬ್ಯಾಕ್ಟಿರಿಯಾ ಸೋಂಕು ತಡೆಗೆ ಔಷಧಿ ನೀಡಲಾಗುತ್ತಿದೆ ಎಂದವರು ಹೇಳಿದರು. 

 

About the author

ಕನ್ನಡ ಟುಡೆ

Leave a Comment