ರಾಷ್ಟ್ರ ಸುದ್ದಿ

ಪಿಎಂ ಮೋದಿ, ಸಿಎಂ ಯೋಗಿ ಆದಿತ್ಯನಾಥ್‌ಗೆ ಟೀಕಿಸಿದ ದಿವ್ಯಾಂಗಿಗೆ ಬಿಜೆಪಿ ಮುಖಂಡನಿಂದ ಥಳಿತ, ಕೊನೆಗೆ ಜೈಲು

ಸಂಭಾಲ್‌: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಅವರ ರಾಜಕೀಯ ನಡೆಯನ್ನು ಟೀಕಿಸಿದ ಕಾರಣಕ್ಕೆ ದಿವ್ಯಾಂಗಿಯೊಬ್ಬರಿಗೆ ಸ್ಥಳೀಯ ಬಿಜೆಪಿ ಮುಖಂಡ ಥಳಿಸಿದ್ದಾರೆ. ವೀಡಿಯೋ ವೈರಲ್‌ ಆಗಿದೆ. ಕೊನೆಗೆ ದಿವ್ಯಾಂಗಿಯ ಮೇಲೆಯೇ ಶಾಂತಿ ಕದಡಿದ ಆರೋಪ ಹೊರಿಸಿ ಜೈಲಿಗೆ ಕಳುಹಿಸಲಾಗಿದೆ. ವೀಡಿಯೋದಲ್ಲಿ ಬಿಜೆಪಿ ಮುಖಂಡ ಮೊಹಮ್ಮದ್‌ ಮಿಯಾನ್‌, 22 ವರ್ಷದ ದಿವ್ಯಾಂಗಿ ಮನೋಜ್‌ ಗುಜ್ಜಾರ್‌ ಎಂಬಾತನಿಗೆ ಕೋಲಿನಿಂದ ಹೊಡೆಯುತ್ತಿರುವ ದೃಶ್ಯ ಸೆರೆಯಾಗಿದೆ. ‘ನನ್ನ ಮತ ಏನಿದ್ದರೂ ಅಖಿಲೇಶ್‌ ಅವರಿಗೆ’ ಎಂದು ಮನೋಜ್‌ ಹೇಳುತ್ತಿರುವುದು ರೆಕಾರ್ಡ್‌ ಆಗಿದೆ.

ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಂಭಾಲ್‌ ಜಿಲ್ಲೆಯ ಮ್ಯಾಜಿಸ್ಟ್ರೇಟ್‌ ದೀಪೆಂದರ್‌ ಯಾದವ್‌ ಅವರನ್ನು ಭೇಟಿ ಮಾಡಲು ಹೋಗಿದ್ದ ಸಂದರ್ಭ ಘಟನೆ ನಡೆದಿದೆ. ಖರ್ಜಾಗೇಟ್‌ನ ನಿವಾಸಿ ಗುಜ್ಜಾರ್‌, ಬಿಜೆಪಿ ಕಾರ್ಯಕರ್ತರನ್ನು ನೋಡಿದ ತಕ್ಷಣ ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಮತ್ತು ಸಮಾಜವಾದಿ ಪಕ್ಷದ ಪರ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಟೀಕಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಿಜೆಪಿ ಮುಖಂಡ ತನ್ನ ಗಾಡಿಯಲ್ಲಿದ್ದ ಲಾಠಿಯಿಂದ ಯುವಕನನ್ನು ಥಳಿಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಲು ಆರಂಭಿಸಿದ. ಇದು ನನ್ನ ತಾಳ್ಮೆ ಕೆಡಲು ಕಾರಣ. ಸಾರ್ವಜನಿಕವಾಗಿ ಯುವಕನ ಕ್ಷಮೆ ಕೇಳುತ್ತೇನೆ’ ಎಂದು ಮಿಯಾನ್‌ ಟೈಮ್ಸ್‌ ಆಫ್‌ ಇಂಡಿಯಾಗೆ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment