ಕ್ರೀಡೆ

ಪುಣೇರಿ ಎದುರು ಬೆಂಗಳೂರು ಬುಲ್ಸ್ ಸೋಲು

ಪುಣೆ: ಕೊನೇ ನಾಲ್ಕು ನಿಮಿಷಗಳಲ್ಲಿ ಎಡವಿದ ಬೆಂಗಳೂರು ಬುಲ್ಸ್ ತಂಡ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ ತನ್ನ 3ನೇ ಪಂದ್ಯದಲ್ಲಿ ಆತಿಥೇಯ ಪುಣೇರಿ ಪಲ್ಟಾನ್ ತಂಡದ ವಿರುದ್ಧ ವೀರೋಚಿತವಾಗಿ ಸೋಲು ಕಂಡಿತು. ಇದರಿಂದ ಬುಲ್ಸ್ ಪಡೆ ಹ್ಯಾಟ್ರಿಕ್ ಗೆಲುವು ತಪ್ಪಿಸಿಕೊಂಡರೆ, ಪುಣೆ ತಂಡ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು.

ಶ್ರೀ ಶಿವ ಛತ್ರಪತಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್​ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬುಲ್ಸ್ 25-27 ಅಂಕಗಳಿಂದ ಪುಣೆ ವಿರುದ್ಧ ಸೋತಿತು. ಮೊದಲಾರ್ಧದಲ್ಲಿ 13-10 ಮುನ್ನಡೆ ಕಂಡಿದ್ದ ಬುಲ್ಸ್, ನಂತರ ಎದುರಾಳಿ ಪಡೆಯಿಂದ 28ನೇ ನಿಮಿಷದವರೆಗೆ ಸಮಬಲದ ಹೋರಾಟ ಎದುರಿಸಿತು. ಬುಲ್ಸ್ 29ನೇ ನಿಮಿಷದಲ್ಲಿ ಪುಣೆ ತಂಡವನ್ನು ಪಂದ್ಯದಲ್ಲಿ ಮೊದಲ ಬಾರಿ ಆಲೌಟ್ ಮಾಡಿ 22-20 ಮುನ್ನಡೆ ಕಂಡಿತು. 36ನೇ ನಿಮಿಷದಲ್ಲಿ ಸ್ಟಾರ್ ರೈಡರ್ ಪವನ್​ರನ್ನು ಟ್ಯಾಕಲ್ ಮಾಡಿದ ಪುಣೆ 24-23 ಮೇಲುಗೈ ಸಾಧಿಸಿತು. 23-25 ಹಿನ್ನಡೆಯಲ್ಲಿದ್ದ ಬುಲ್ಸ್ ಕೊನೇ 2 ನಿಮಿಷಗಳಿದ್ದ ವೇಳೆ ನಿತಿನ್ ತೋಮರ್​ರನ್ನು ಸೂಪರ್ ಟ್ಯಾಕಲ್ ಮಾಡಿ 25-25 ಸಮಬಲದೊಂದಿಗೆ ಲಯಕ್ಕೆ ಮರಳಿದರೂ ನಂತರ ರೈಡಿಂಗ್​ನಲ್ಲಿ ವಿಫಲಗೊಂಡು ಹಿನ್ನಡೆ ಎದುರಿಸಿತು.

About the author

ಕನ್ನಡ ಟುಡೆ

Leave a Comment