ಕ್ರೀಡೆ

ಪುತ್ರನ ಫೋಟೋ ಬಹಿರಂಗಪಡಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ: ಸಾಮಾಜಿಕ ಜಾಲತಾಣಗಲ್ಲಿ ಫೋಟೋ ವೈರಲ್

ನವದೆಹಲಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಇದೇ ಮೊದಲ ಬಾರಿಗೆ ತಮ್ಮ ಪುತ್ರ ಇಜಾನ್ ಫೋಟೋವನ್ನು ಸಾಮಾಜಿಕ ಜಾಲತಾಣಗಲ್ಲಿ ಬಹಿರಂಗಗೊಳಿಸಿದ್ದು, ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ. ಸಾನಿಯಾ ಅವರು ನಿನ್ನೆಯಷ್ಟೇ ತಮ್ಮ ಇನ್ ಸ್ಟ್ರಾಗ್ರಾಂ ಖಾತೆಯಲ್ಲಿ ಮಗುವಿನ ಫೋಟೋವನ್ನು ಹಾಕಿದ್ದು, ಈ ಫೋಟೋಗೆ ಸಾಕಷ್ಟು ಜನರು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ವೇಗದ ಜಗತ್ತಿನಲ್ಲಿ ಜೀವನ ಮಜವಾಗಿರುತ್ತದೆ. ಜಗತ್ತಿಗೆ ಪರಿಚಯ ಮಾಡಿಕೊಳ್ಳಲು ಇದು ಸೂಕ್ತ ಸಮಯ ಎಂದು ಬರೆದಿರುವ ಸಾನಿಯಾ ಮಗುವಿನ ಪೋಟೋವನ್ನು ಬಹಿರಂಗಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment