ಸಿನಿ ಸಮಾಚಾರ

ಪುನೀತ್ ಅಭಿನಯದ ನಟಸಾರ್ವಭೌಮ ಸಿನಿಮಾ ಜನವರಿ 5ಕ್ಕೆ ಆಡಿಯೋ ಲಾಂಚ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾ ಜನವರಿ 24ಕ್ಕೆ ಬದಲಾಗಿ ಫೆಬ್ರವರಿ 7ಕ್ಕೆ ರಿಲೀಸ್ ಆಗಲಿದೆ, ಆ್ಯಕ್ಷನ್ ಮತ್ತು ಕಮರ್ಷಿಯಲ್ ಕಥೆಯುಳ್ಳ ಸಿನಿಮಾ ಇದಾಗಿದೆ.
ಪುನೀತ್ ನಟನೆಯ ಒಂದೇ ಒಂದು ಸಿನಿಮಾ ಕೂಡ 2018ರಲ್ಲಿ ರಿಲೀಸ್ ಆಗಿಲ್ಲ, ತಮ್ಮ ನೆಚ್ಚಿನ ನಟನ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ, ಇನ್ನೂ ಸಿನಿಮಾ ತಂಡ ಜನವರಿ 5 ರಂದು ಹುಬ್ಬಳ್ಳಿಯಲ್ಲಿ ನಟ ಸಾರ್ವಭೌಮ ಮೆಗಾ ಆಡಿಯೋ ರಿಲೀಸ್  ಮಾಡಲು ತಯಾರಿ ನಡೆಸುತ್ತಿದೆ. ರಾಕ್ ಲೈನ್ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ, ಅನುಪಮ್ ಪರಮೇಶ್ವರನ್ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ರಚಿತಾ ರಾಮ್ ಪುನೀತ್ ಜೊತೆ ನಾಯಕಿಯಾಗಿ ನಟಿಸಿದ್ದಾರೆ.

About the author

ಕನ್ನಡ ಟುಡೆ

Leave a Comment