ಸಿನಿ ಸಮಾಚಾರ

ಪುನೀತ್ ರಾಜ್ ಕುಮಾರ್ ಹೂಸ ಸಿನಿಮಾದಲ್ಲಿ ರಚಿತಾ ರಾಮ್

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅವರ ಇನ್ನೂ ಚಿತ್ರದ ಮೊದಲ ಆಯ್ಕೆಯ ನಟಿ ಪ್ರಾಜೆಕ್ಟ್ ನಿಂದ ಹೊರಬಂದಿದ್ದಾರೆ ಅಲ್ಲಿಗೆ ರಚಿತಾ ರಾಮ್ ಪ್ರವೇಶವಾಗುವ ಸಾಧ್ಯತೆಯಿದೆ ಎಂದು ತಿಳಿದು ಬರುತ್ತಿದೆ.
ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ಆರಂಭದಲ್ಲಿ ನಾಯಕಿಯಾಗಿ ಪ್ರಿಯಾಂಕ ಜವಲ್ಕರ್ ಆಯ್ಕೆಯಾಗಿದ್ದಾರೆ. ಇದೀಗ ಆಕೆ ಹೊರಬಂದಿದ್ದು ಕನ್ನಡದ ನಟಿ ರಚಿತಾ ರಾಮ್ ಆಯ್ಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಭಾನುವಾರ ಆರಂಭಗೊಂಡ ಶೂಟಿಂಗ್ ನಲ್ಲಿ ಪ್ರಿಯಾಂಕಾ ಇದ್ದರು. ಆದರೆ ಇದೀಗ ನಾಯಕಿ ಬದಲಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ನಿರ್ದೇಶಕರಾಗಲಿ ನಿರ್ಮಾಣ ತಂಡವಾಗಲಿ ಯಾರು ದೃಢಪಡಿಸಿಲ್ಲ.
ರಚಿತಾ ರಾಮ್ ಈಗಾಗಲೇ ಚಿತ್ರತಂಡದ ಜೊತೆ ಸೇರಿ ಶೂಟಿಂಗ್ ಆರಂಭಿಸಿದ್ದಾರೆ. ಯಾವ ಕಾರಣಕ್ಕೆ ನಾಯಕಿ ಬದಲಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲವಾದರೂ ಬೇರೆ ಚಿತ್ರಗಳಲ್ಲಿ ಪ್ರಿಯಾಂಕ ಅವರು ಬ್ಯುಸಿಯಾಗಿರುವುದರಿಂದ ಅವರಿಗೆ ಈ ಚಿತ್ರಕ್ಕೆ ಸಂಪೂರ್ಣ ಸಮಯವನ್ನು ನೀಡಲಾಗುತ್ತಿಲ್ಲ ಎನ್ನಲಾಗುತ್ತಿದೆ. ಅಲ್ಲದೆ ನಿರ್ದೇಶಕರು ಕನ್ನಡ ಭಾಷೆ ಗೊತ್ತಿರುವ ನಾಯಕಿಯನ್ನೆ ಹಾಕಿಕೊಂಡರೆ ಉತ್ತಮ ಎಂದು ಅಂತಿಮ ಕ್ಷಣದಲ್ಲಿ ಮನಸ್ಸು ಬದಲಾಯಿಸಿದರು ಎನ್ನಲಾಗುತ್ತಿದೆ.

 

About the author

ಕನ್ನಡ ಟುಡೆ

Leave a Comment