ರಾಷ್ಟ್ರ ಸುದ್ದಿ

ಪುಲ್ವಾಮಾ ದಾಳಿ ನಂತರ ಮೂರು ಎನ್ ಕೌಂಟರ್, 9 ಜೈಶ್ ಉಗ್ರರು ಹತ

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆದ ನಂತರ ಭಾರತೀಯ ರಕ್ಷಣಾ ಪಡೆ ಕಳೆದ 10 ದಿನಗಳಲ್ಲಿ ನಡೆದ ಮೂರು ಎನ್ ಕೌಂಟರ್ ನಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ 9 ಉಗ್ರರನ್ನು ಕೊಂದು ಹಾಕಿದೆ.
ಕಳೆದ ಭಾನುವಾರ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಟುರಿಜಿಯಮ್ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಮೂವರು ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ಹತರಾಗಿದ್ದರು. ಭಾರತೀಯ ಸೇನೆಯ ಯುವ ಪೊಲೀಸ್ ಅಧಿಕಾರಿ ಅಮನ್ ಠಾಕೂರ್ ಮತ್ತು ಸೇನಾಧಿಕಾರಿ ನಾಯಿಬ್ ಸುಬೇದಾರ್ ಸೊಂಬಿರ್ ಸಿಂಗ್ ಹುತಾತ್ಮರಾಗಿದ್ದರು. ನಾಲ್ವರು ಯೋಧರು ಗಾಯಗೊಂಡಿದ್ದರು. ಫೆಬ್ರವರಿ 14ರ ಆತ್ಮಾಹುತಿ ದಾಳಿ ನಂತರ ಕಳೆದ 10 ದಿನಗಳಲ್ಲಿ ಮೂರು ಎನ್ ಕೌಂಟರ್ ನಡೆದಿದ್ದು ಹತರಾದ 9 ಉಗ್ರರಲ್ಲಿ ಇಬ್ಬರು ಸ್ಥಳೀಯರು ಮತ್ತು ಏಳು ಮಂದಿ ಪಾಕಿಸ್ತಾನದವರಾಗಿದ್ದಾರೆ.

About the author

ಕನ್ನಡ ಟುಡೆ

Leave a Comment