ರಾಷ್ಟ್ರ ಸುದ್ದಿ

ಪುಲ್ವಾಮಾ ದಾಳಿ: ಫೋಟೋಶೂಟ್ ನಿರತ ಮೋದಿ ಪ್ರೈಮ್ ಟೈಮ್ ಮಿನಿಸ್ಟರ್: ರಾಹುಲ್ ಗಾಂಧಿ

ನವದೆಹಲಿ: ಪುಲ್ವಾಮಾದಲ್ಲಿ ಭಯೋತ್ಪಾದಕರು ಯೋಧರ ರಕ್ತಪಾತ ಹರಿಸಿದ್ದರೆ ಇತ್ತ ಪ್ರಧಾನಿ ನರೇಂದ್ರ ಮೋದಿ ಮಾತ್ರ ಫೋಟೋಶೂಟ್ ನಲ್ಲಿ ತೊಡಿಗಿದ್ದು ಅವರು ಪ್ರೈಮ್ ಟೈಮ್ ಮಿನಿಸ್ಟರ್ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
40ಕ್ಕೂ ಹೆಚ್ಚು ಭಾರತೀಯ ಯೋಧರು ಉಗ್ರ ದಾಳಿಯಲ್ಲಿ ಮೃತಪಟ್ಟಿದ್ದು ಇದಕ್ಕೆ ದೇಶವೇ ಕಂಬನಿ ಮಿಡಿಯುತ್ತಿದ್ದರೆ ಪ್ರಧಾನಿಗಳು ಮಾತ್ರ ಸಂಜೆಯವರೆಗೂ ಫೋಟೋಶೂಟ್ ನಲ್ಲಿ ನಿರತರಾಗಿದ್ದರು. ಇವರು ದೇಶದ ಪ್ರಧಾನಿಯಲ್ಲ ಪ್ರೈಮ್ ಟೈಮ್ ಪ್ರಧಾನಿಯೆಂದು ರಾಹುಲ್ ಗಾಂಧಿ ಜರಿದಿದ್ದಾರೆ. ಪುಲ್ವಾಮಾದಲ್ಲಿ ಉಗ್ರ ದಾಳಿ ಮೂರು ಗಂಟೆಗಳ ಬಳಿಕವೂ ಪ್ರಧಾನಿ ಮೋದಿಯವರು ಫೋಟೋಶೂಟ್ ನಲ್ಲಿ ತೊಡಗಿದ್ದರು. ಅವರಿಗೆ ದೇಶದ ಭದ್ರತೆಗಿಂತ ಅವರ ಫೋಟೋಶೂಟ್ ಮುಖ್ಯವಾಗಿತ್ತು ಎಂದರು. ಫೆಬ್ರವರಿ 14ರಂದು ಪ್ರಧಾನಿ ಅವರು ಕೊರ್ಬೆಟ್ ನ್ಯಾಷನಲ್ ಪಾರ್ಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದು ವಿವಿಧ ಭಂಗಿಯಲ್ಲಿ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment