ಸಿನಿ ಸಮಾಚಾರ

ಪುಲ್ವಾಮಾ ದಾಳಿ ಬಳಿಕ ಬಾಲಿವುಡ್‍ನಿಂದ ಪಾಕ್ ಕಲಾವಿದರಿಗೆ ನಿರ್ಬಂಧ; ಎಐಸಿಡಬ್ಲ್ಯೂಎ ದಿಟ್ಟ ನಿರ್ಧಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಭೀಕರ ದಾಳಿ ಬಳಿಕ ಪಾಕಿಸ್ತಾನದ ನಟ-ನಟಿಯರು ಸೇರಿದಂತೆ ಎಲ್ಲಾ ಕಲಾವಿದರಿಗೆ ಭಾರತೀಯ ಸಿನಿಮಾ ನೌಕರರ ಒಕ್ಕೂಟ(ಎಐಸಿಡಬ್ಲ್ಯೂಎ) ನಿರ್ಬಂಧ ಹೇರಿದೆ.
ಹೌದು, ಪಾಕಿಸ್ತಾನ ನಟ, ನಟಿಯರು ಹಾಗೂ ಇತರೆ ಕಲಾವಿದರ ಮೇಲೆ ಶಾಶ್ವತ ನಿಷೇಧ ಹೇರುವುದಾಗಿ ಎಐಸಿಡಬ್ಲ್ಯೂಎ ಹೇಳಿದೆ. ಒಂದು ವೇಳೆ ಯಾವುದೇ ನಿರ್ಮಾಪಕ ಪಾಕಿಸ್ತಾನ ಕಲಾವಿದರ ಜತೆ ಕೆಲಸ ಮಾಡುವ ಬೇಡಿಕೆ ಇಟ್ಟರೆ ಆ ನಿರ್ಮಾಪಕರನ್ನೇ ಒಕ್ಕೂಟದಿಂದ ನಿಷೇಧಿಸಲಾಗುವುದು ಎಂದು ಒಕ್ಕೂಟ ಸ್ಪಷ್ಟಪಡಿಸಿದೆ. ಎಐಸಿಡಬ್ಲ್ಯೂಎ ನಿರ್ಧಾರಕ್ಕೆ ಭಾರೀ ಜನ ಬೆಂಬಲ ವ್ಯಕ್ತವಾಗಿದೆ.

About the author

ಕನ್ನಡ ಟುಡೆ

Leave a Comment