ರಾಷ್ಟ್ರ ಸುದ್ದಿ

ಪುಲ್ವಾಮ ದಾಳಿಯ ನಂತರ 6 ಜೈಶ್ ಉಗ್ರರು ಸೇರಿ 18 ಉಗ್ರರ ಹತ್ಯೆ: ಭಾರತೀಯ ಸೇನೆ

ಶ್ರೀನಗರ: ಪುಲ್ವಾಮ ಉಗ್ರ ದಾಳಿಯ ನಂತರ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಆರು ಉಗ್ರರು ಸೇರಿದಂತೆ ಇದುವರೆಗೆ ಒಟ್ಟು 18 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೋಮವಾರ ಭಾರತೀಯ ಸೇನೆ ತಿಳಿಸಿದೆ. ಈ ಕುರಿತು ಇಂದು ಜಂಟಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಿಆರ್ ಪಿಎಫ್ ಮತ್ತು ಪೊಲೀಸರು, ಪುಲ್ವಾಮ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮುದಸಿರ್ ಅಹ್ಮದ್ ಖಾನ್ ನನ್ನು ಎನ್ ಕೌಂಟರ್ ಮಾಡಲಾಗಿದೆ ಎಂದರು. ಫೆಬ್ರವರ 14ರ ಪುಲ್ವಾಮ ಉಗ್ರ ದಾಳಿಯ ನಂತರ ದಕ್ಷಿಣ ಕಾಶ್ಮೀರದ ಥ್ರಾಲ್ ಪ್ರದೇಶದಲ್ಲಿ ಹೆಚ್ಚಿನ ಕಾರ್ಯಾಚರಣೆ ನಡೆಸಲಾಗಿದೆ ಸೇನೆ ತಿಳಿಸಿದೆ. ಫೆಬ್ರವರಿ 14ರಿಂದ ಇಲ್ಲಿಯವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 18 ಉಗ್ರರು ಬಲಿಯಾಗಿದ್ದು, ಇದರಲ್ಲಿ 6 ಮಂದಿ ಪಾಕಿಸ್ತಾನದ ಮೂಲದವರು ಎನ್ನುವುದು ಖಚಿತವಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಎಸ್‍ಪಿ ಪಾಣಿ ಅವರು ತಿಳಿಸಿದ್ದಾರೆ. ಹತ್ಯೆಯಾದ ಈ ಎಲ್ಲಾ ಉಗ್ರರು ಸರ್ಚ್ ಕಾರ್ಯಾಚರಣೆ ನಡೆಸುವ ವೇಳೆ ಯೋಧರ ವಿರುದ್ಧವೇ ದಾಳಿ ನಡೆಸಿದ್ದರು. ಪ್ರತಿ ದಾಳಿ ನಡೆದ ವೇಳೆ ಮುದಸಿರ್ ಹಾಗೂ ಇತರೆ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದರು. 2018ರಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ನಡೆದ ಕಾರ್ಯಾಚರಣೆಯಲ್ಲಿ 1,629 ಮಂದಿ ಉಗ್ರರನ್ನು ಸೇನೆ ಹತ್ಯೆ ಮಾಡಿತ್ತು.

About the author

ಕನ್ನಡ ಟುಡೆ

Leave a Comment