ರಾಷ್ಟ್ರ ಸುದ್ದಿ

ಪೂಜೆಗೆ ಸುಪ್ರೀಂ ನಕಾರ

ಹೊಸದಿಲ್ಲಿ: “ದೇಶದಲ್ಲಿ ಯಾರೂ ನೆಮ್ಮದಿಯಿಂದ ಇರಲು ನೀವು ಬಿಡುವುದಿಲ್ಲ ಅಲ್ಲವೇ?’ ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ- ಬಾಬ್ರಿ ಮಸೀದಿಯ ಸುತ್ತಮುತ್ತ ಲಿರುವ 9 ದೇಗುಲಗಳಲ್ಲಿ ಪೂಜೆಗೆ ಅವಕಾಶ ನೀಡ ಬೇಕೆಂದು ಪಂಡಿತ್‌ ಅಮರ್‌ನಾಥ್‌ ಮಿಶ್ರಾ ಎಂಬವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ನ್ಯಾಯಪೀಠ, “ಯಾವಾಗಲಾದರೂ ಏನಾದರೊಂದು ರಗಳೆ ಇದ್ದೇ ಇರುತ್ತದಲ್ಲವೇ’ ಎಂದು ಅರ್ಜಿ ದಾರರ ನಡೆಯನ್ನು ಆಕ್ಷೇಪಿಸಿತು. ಇದೇ ಮನವಿಯನ್ನು ಜ. 10ರಂದು ತಳ್ಳಿಹಾಕಿದ್ದ ಅಲಹಾಬಾದ್‌ ಹೈಕೋರ್ಟ್‌, ಮಿಶ್ರಾರಿಗೆ 5 ಲಕ್ಷ ರೂ. ದಂಡವನ್ನೂ ವಿಧಿಸಿತ್ತು.

About the author

ಕನ್ನಡ ಟುಡೆ

Leave a Comment