ರಾಷ್ಟ್ರ

ಪೆಟ್ರೋಲ್ ಡೀಸಲ್ ದರದಲ್ಲಿ ದಾಖಲೆಯ ಏರಿಕೆ

ಪ್ರಧಾನಿ  ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡು ಬಂದಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 74.40 ರೂ., ಡಿಸೇಲ್‌ ದರ 65.65 ರೂ.ಗೆ ತಲುಪಿದೆ.ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಭಾರತದಲ್ಲೇ ಅತಿ ಹೆಚ್ಚಿನ ಬೆಲೆಯಿದ್ದು, ವಾಹನ ಸವಾರರ ಜೇಬು ಸುಡುತ್ತಿದೆ. ಕಳೆದ ವರ್ಷದ ಜೂನ್‌‌ನಿಂದ ಪ್ರತಿದಿನ ತೈಲ ಬೆಲೆ ನಿಗದಿ ನಿಯಮ ಜಾರಿಗೆ ಬಂದ ಬಳಿಕ ಪೆಟ್ರೋಲ್‌, ಡಿಸೇಲ್‌ ಬೆಲೆ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇಂದು ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆಯಲ್ಲಿ 19 ಪೈಸೆ ಏರಿಕೆ ಕಂಡಿದೆ. ನಿನ್ನೆ ಪೆಟ್ರೋಲ್‌‌ ಬೆಲೆಯಲ್ಲಿ 13 ಪೈಸೆ, ಡಿಸೇಲ್‌‌ ಬೆಲೆಯಲ್ಲಿ 15 ಪೈಸೆ ಏರಿಕೆಯಾಗಿತ್ತು.

About the author

ಕನ್ನಡ ಟುಡೆ

Leave a Comment