ರಾಷ್ಟ್ರ

ಪೆರೋಲ್’ಗೆ ಅರ್ಜಿ ಪತಿಯ ಅಂತ್ಯಾಸಂಸ್ಕಾರದಲ್ಲಿ ಭಾಗಿ ಶಶಿಕಲಾ

ಬೆಂಗಳೂರು: ಪತಿ ನಟರಾಜನ್ ಅವರು ನಿಧನ ಹೊಂದಿರುವ ಹಿನ್ನಲೆಯಲ್ಲಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳುವ ಸಲುವಾಗಿ 15 ದಿನಗಳ ಪೆರೋಲ್’ಗೆ ಅನುಮತಿ ನೀಡುವಂತೆ ಎಐಎಡಿಎಂಕೆ ಉಚ್ಛಾಟಿತ ಮುಖ್ಯಸ್ಥೆ ವಿ.ಕೆ.ಶಶಿಕಲಾ ಅವರು ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

ಅಕ್ರಮ ಆಸ್ತಿ ಪ್ರಕರಣದಲ್ಲಿ ಶಶಕಲಾ ಅವರು ನಗರದ ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹದಲ್ಲಿ 4 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಪತಿಯ ನಿಧನ ಹಿನ್ನಲೆಯಲ್ಲಿ ಪೆರೋಲ್ ಮೇಲೆ ಹೊರಗೆ ಬರಲಿರುವ ಶಶಿಕಲಾ ಅವರು ಚೆನ್ನೈನತ್ತ ಪ್ರಯಾಣ ಬೆಳೆಸಲಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟರಾಜನ್ ಅವರನ್ನು ನೋಡುವ ಸಲುವಾಗಿ ಶಶಿಕಲಾ ಅವರು 5 ದಿನಗಳ ಪೆರೋಲ್ ಪಡೆದು ಹೊರಗೆ ಬಂದಿದ್ದರು.

 

About the author

ಕನ್ನಡ ಟುಡೆ

Leave a Comment