ಕ್ರೈಂ

ಪೊಲೀಸರ ದಾಳಿ ಕಲಬುರ್ಗಿ ಜೈಲಿನಲ್ಲಿ ಅಕ್ರಮ ಚಟುವಟಿಕೆ ಗಾಂಜಾ, ಮಾರಕಾಸ್ತ್ರ ಪತ್ತೆ

ಕಲಬುರ್ಗಿ: ಇಲ್ಲಿನ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ಗುರುವಾರ ದಿಢೀರ್ ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿದ್ದ ಗಾಂಜಾ ಹಾಗೂ ಮಾರಕಾಸ್ತ್ರಗಳು ಪತ್ತೆಯಾಗಿವೆ.

ಜೈಲಿನಲ್ಲಿ ಅಕ್ರಮ ಚಟುವಟಿಕೆಗಳ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್. ಶಶಿಕುಮಾರ್, ಎಎಸ್‌ಪಿ ಜಯಪ್ರಕಾಶ್ ನೇತೃತ್ವದ ಪೊಲೀಸರ ದಾಳಿ ಮಾಡಿದೆ.

ದಾಳಿ ವೇಳೆ 40 ಚಾಕು, 13 ಟೇಬಲ್ ಫ್ಯಾನ್‌, ಎರಡು ಸಿಮ್‌, 12 ಲೈಟರ್, ನೇಲ್ ಕಟರ್, ಅಡಕೆ ಚೀಟಿ, ಬೀಡಿ, ಸಿಗರೇಟು, ಗುಟ್ಕಾ, ಅಡುಗೆಗೆ ಬಳಸುವ ಮಸಾಲೆ ಪದಾರ್ಥ, ಮಿಕ್ಸರ್, 5 ಕೆ.ಜಿ. ಶೇಂಗಾ ಎಣ್ಣೆ ಹಾಗೂ 4,000 ನಗದು ಪತ್ತೆಯಾಗಿದೆ.

About the author

ಕನ್ನಡ ಟುಡೆ

Leave a Comment