ಸುದ್ದಿ

ಪೊಲೀಸರ ಯಾಮಾರಿಸಲು ಹೋಗಿ ಸೆರೆಯಾದ ಇಂಜಿನಿಯರ್​

ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪೊಲೀಸರಿಗೆ ಮಂಕುಬೂದಿ ಎರಚಲು ಹೋದವ ಸೆರೆಯಾಗಿದ್ದಾನೆ. ಒರಿಸ್ಸಾ ಮೂಲಕ ಸೌಮ್ಯ ರಂಜನ್​ ಮಿಶ್ರಾ ಬಂದಿತ.

ಈತ ಬೆಂಗಳೂರಿನಲ್ಲಿ ಇಂಜಿನಿಯರ್​ ಆಗಿದ್ದು ನಿನ್ನೆ ಕೊಡಗು ಜಿಲ್ಲೆಗೆ ಪತ್ನಿಯೊಂದಿಗೆ ಬಂದಿದ್ದ. ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಕರೆ ಮಾಡಿ ನಾನು ಐಎಎಸ್​ ಅಧಿಕಾರಿ ಎಂದು ಹೇಳಿಕೊಂಡಿದ್ದಲ್ಲದೆ ಸುತ್ತಾಡಲು ಭದ್ರತೆ, ಎಸ್ಕಾಟ್​ ಒದಗಿಸುವಂತೆ ತಿಳಿಸಿದ್ದ. ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಅದು ಸುಳ್ಳು ಎಂದು ಗೊತ್ತಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment