ರಾಜಕೀಯ

ಪೊಲೀಸ್ ಪೇದೆಗಳ ಕಲ್ಯಾಣವೇ ನನ್ನ ಪ್ರಮುಖ ಅಜೆಂಡಾ: ಗೃಹ ಸಚಿವ ಎಂ.ಬಿ. ಪಾಟೀಲ್

ಬೆಂಗಳೂರು: ಪೊಲೀಸ್ ಪೇದೆಗಳ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿರುವ ನೂತನ ಗೃಹ ಸಚಿವ ಎಂ.ಬಿ ಪಾಟೀಲ್ ಹಲವು ಕಲ್ಯಾಣ ಕಾರ್ಯಕ್ರಮ ಜಾರಿಗೆ ತರಲು ನಿರ್ಧರಿಸಿದ್ದಾರೆ. ಪೇದೆಗಳ ಜೀವನ ಶೈಲಿ ಉತ್ತಮಗೊಳಿಸಲು ಹಾಗೂ ಅವರ ಸೇವೆಯಲ್ಲಿ ಬದಲಾವಣೆ ತರಲು ಮುಂದಾಗಿದ್ದಾರೆ,.ಕಾಂಗ್ರೆಸ್ ಹಿರಿಯ ನಾಯಕರು ಎಂ.ಬಿ ಪಾಟೀಲ್ ಅವರಿಗೆ ಗೃಹಖಾತೆ ನೀಡಿದ್ದಾರೆ. ರಾಜ್ಯದ ಭದ್ರತೆಯ ಮಹತ್ವದ ಜವಾಬ್ದಾರಿ ವಹಿಸಿದ್ದಾರೆ ಹಲವು ವಿಷಯಗಳ ಬಗ್ಗೆ ಗಮನ ಹರಿಸುವ ಅಗತ್ಯತೆ ಇದೆ, ಸಂಚಾರ ವ್ಯವಸ್ಥೆ, ಪೇದೆಗಳ ಜೀವನ ಶೈಲಿ ಉತ್ತಮವಾಗಿಸಲು ಹಲವು ಕ್ರಮಗಳನ್ನು ಅನುಸರಿಸುವ ಅಗತ್ಯತೆ ಇದೆ ಎಂದು ತಿಳಿಸಿದ್ದಾರೆ. ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲವಾಗುವಂತ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ, ರಿಂಗ್ ರೋಡ್ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡುವುದು ದೀರ್ಘಾವಧಿಯ ಪರಿಹಾರ, ಆದರೆ ಕಡಿಮೆ ಅವಧಿಯಲ್ಲಿ ಸಂಚಾರ ಸಮಸ್ಯೆ ಬಗೆಹರಿಸುವುದು ಸದ್ಯದ ವಿಷಯ, ಆದರೆ ಸದ್ಯದಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಸಂಚಾರ ದಟ್ಟಣೆ ಮಾಡುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ತಮ್ಮ ಮುಂದಿರುವ ಸವಾಲುಗಳ ಬಗ್ಗೆ ತಮಗೆ ಅರಿವಿದೆ, ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಂಡಿರುವ ವಿಧಾನಗಳ ಬಗ್ಗೆ ಅಧ್ಯಯನ ನಡೆಸಿ ಕರ್ನಾಟಕದಲ್ಲಿಯೂ ಅದನ್ನು ಅಳವಡಿಸಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ,

About the author

ಕನ್ನಡ ಟುಡೆ

Leave a Comment