ರಾಜ್ಯ ಸುದ್ದಿ

ಪೊಲೀಸ್ ಪೇದೆ ಜೀವ ರಕ್ಷಿಸಿದ ಬಿಎಂಟಿಸಿ ಚಾಲಕ, ನಿರ್ವಾಹಕರಿಗೆ ಪರೋಪಕಾರಿ ಪ್ರಶಸ್ತಿ

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದ ಗಾಯಾಳುವನ್ನು ಸಕಾಲಕ್ಕೆ ಆಸ್ಪತೆಗೆ ಸೇರಿಸಿ ಮಾನವೀಯತೆ ಮೆರೆದ ಬಿಎಂಟಿಸಿ ಚಾಲಕ ವೈ.ಎನ್‌. ಗಂಗಾಧರ್‌ ಮತ್ತು ನಿರ್ವಾಹಕ ಟಿ. ಶ್ರೀನಿವಾಸ್‌ ಅವರನ್ನು ಇಡೀ ರಾಜ್ಯದ ಜನತೆ ಪ್ರಶಂಸಿತ್ತು,
ಹಾಸ್‌ಮ್ಯಾಟ್‌ ಆಸ್ಪತ್ರೆ ಈ ವರ್ಷದ ಹಾಸ್‌ ಮ್ಯಾಟ್‌ ಪರೋಪಕಾರಿ ಪ್ರಶಸ್ತಿ ಪ್ರಕಟಿಸಿದ್ದು ಅಪಘಾತದಲ್ಲಿ ಮಾನವೀಯತೆ ಮೆರೆದ ಬಿಎಂಟಿಸಿ ಬಸ್‌ ಚಾಲಕ ವೈ.ಎನ್‌.ಗಂಗಾಧರ್‌ ಮತ್ತು ನಿರ್ವಾಹಕ ಟಿ.ಶ್ರೀನಿವಾಸ್‌ ಉತ್ತಮ ಪರೋಪಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಡಿ. 29ರ ರಾತ್ರಿ  ಕೆಲಸ ಮುಗಿಸಿಕೊಂಡು ಹೋಗುವಾಗ ಯಲಹಂಕ – ನೆಲಮಂಗಲ ಮಾರ್ಗದಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಪೇದೆ ಸಿದ್ದರಾಜು ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ರಸ್ತೆ ಬದಿ ರಕ್ತದ ಮಡುವಿನಲ್ಲಿ ನೋವಿನಿಂದ ನರಳುತ್ತಿದ್ದ ಅವರನ್ನು ಜನರು ನೋಡಿಕೊಂಡು ಹೋಗುತ್ತಿದ್ದರು ಆದರೆ ಯಾರೂ ನೆರವಿಗೆ ಧಾವಿಸಲಿಲ್ಲ.  ಎಲ್ಲರೂ ವಿಡಿಯೋ ಮಾಡಿಕೊಳ್ಳುತ್ತಿದ್ದರು,
ಈ  ಸಮಯದಲ್ಲಿ ರೂಟ್‌ ನಂ. 407 ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಂಗಾಧರ್‌ ಮತ್ತು ಶ್ರೀನಿವಾಸ್‌ ಸಿದ್ದರಾಜು ಸ್ಥಿತಿ ನೋಡಿ, ಬಸ್‌ನಲ್ಲಿಯೇ ಸಿದ್ದರಾಜು ಅವರನ್ನು ಆಸ್ಪತ್ರೆಗೆ ಕರೆದು ಸಕಾಲಕ್ಕೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದರು.

About the author

ಕನ್ನಡ ಟುಡೆ

Leave a Comment