ರಾಜಕೀಯ

ಪ್ರಜ್ವಲ್ ಸೋಲಿಸದಿದ್ದರೇ ರೇವಣ್ಣ ಪಾಠ ಕಲಿಯುವುದಿಲ್ಲ: ಪ್ರೀತಂ ಗೌಡ

ಹಾಸನ: ಹಾಸನ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಈ ಚುನಾವಣೆಯಲ್ಲಿ ಗೆದ್ದರೇ ಮುಗಿಯಿತು, ರೇವಣ್ಣ ಅವರನ್ನು ಮಣಿಸಲು ಸಾಧ್ಯವಿಲ್ಲ, ಹೀಗಾಗಿ  ಪ್ರಜ್ವಲ್ ಸೋಲಿಸಬೇಕು ಎಂದು ಬಿಜೆಪಿ ಶಾಸಕ ಪ್ರೀತಂಗೌಡ ಹೇಳಿದ್ದಾರೆ’

ಪ್ರೀತಂಗೌಡ ಅವರು ಕಾರ್ಯಕರ್ತರಿಗೆ ಪಾಠ ಮಾಡಿರುವ ಆಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಗೆದ್ದರೇ ಅವರ ಮನೆಯಲ್ಲಿ ಪಾತ್ರೆ ತೊಳೆಯುವ ಲಚ್ಚಿಯನ್ನು ನಿಲ್ಲಿಸಿದರೂ ಗೆಲ್ಲುತ್ತೇವೆ ಎಂಬ ಭಾವನೆ ಬಂದು ಬಿಡುತ್ತದೆ, ಅಂಥಹ ಭಾವನೆ ಬರದಂತೆ ನೋಡಿಕೊಳ್ಳಿ ಎಂದು ಪ್ರೀತಂ ಗೌಡ ಹೇಳಿದ್ದಾರೆ.

ಹುಡುಗನ ಹತ್ರ ಹೋಗಿ ಕೈ ಕಟ್ಟಿ ನಿಲ್ಲುತ್ತೀರಾ ಎಂದು ಜೆಡಿಎಸ್ ಕಾರ್ಯಕರ್ತರನ್ನು ಕೇಳಿ, ಈ ರೀತಿ ಭಯ ಹುಟ್ಟಿಸಿ ಆ ಮೂಲಕ ಜೆಡಿಎಸ್ ಕಾರ್ಯಕರ್ತರ ಮನವೊಲಿಸಬೇಕು, ಸೋತಾಗಲೇ ಕಾರ್ಯಕರ್ತರನ್ನು ಕರೆದು ಕೆಲಸ ಕೊಡಬೇಕು, ನಾವು ನಿಮಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ. ಈಗ ಬೂತ್ ಗೆ ಒಂದು ಲಕ್ಷ ರೂ ನೀಡಿದ್ದಾರೆ,  ಸೋಲಿಸಿದರೇ ಮುಂದಿನ ಸಲ 5 ಲಕ್ಷ ಕೊಡುತ್ತಾರೆ.ಈ ವಿಷಯದಲ್ಲಿ ನಿಮಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಮನವೊಲಿಸಬೇಕು ಎಂದು ಅವರು ಆಡಿಯೋದಲ್ಲಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment