ರಾಷ್ಟ್ರ ಸುದ್ದಿ

ಪ್ರತಿದಾಳಿಯಾಗುತ್ತೆ ಗೊತ್ತಿದ್ರೂ ನಿದ್ರೆ ಮಾಡ್ತಿದ್ರಾ: ಕೇಂದ್ರದ ವಿರುದ್ಧ ರಮ್ಯಾ ಆಕ್ರೋಶ

ನವದೆಹಲಿ: ಪಿಒಕೆಯಲ್ಲಿ ಭಾರತೀಯ ವಾಯುಸೇನೆ ದಾಳಿ ಮಾಡಿದ ಬೆನ್ನಲ್ಲೇ ಇಂದು ಬೆಳಗ್ಗೆ ಪಾಕಿಸ್ತಾನ ದಾಳಿ ಮಾಡಿದ್ದು, ದಾಳಿ ಬಳಿಕ ಪ್ರತಿದಾಳಿಯಾಗುತ್ತೆ ಅಂತಾ ಪ್ರಧಾನಿ ಮೋದಿಗೆ ತಿಳಿದಿಲ್ವಾ.. ಅವರು ನಿದ್ರೆ ಮಾಡುತ್ತಿದ್ದರೇ ಎಂದು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಭಾರತದ ಪೈಲಟ್ ಒಬ್ಬರನ್ನು ಪಾಕ್ ಬಂಧಿಸಿದೆ, ಒಬ್ಬ ಪೈಲಟ್ ಹತರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವುದನ್ನು ಆಧಾರ ಮಾಡಿಕೊಂಡ ರಮ್ಯಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ‘ಅವರು ಮತ್ತೆ ಹೀಗೆ ಮಾಡಿದ್ದಾರೆ, ಪಾಕಿಸ್ತಾನ ಪ್ರತ್ಯುತ್ತರ ನೀಡಬಹುದು ಎಂಬ ವಿಚಾರ ನಿಮಗೆ ಗೊತ್ತಿರಲಿಲ್ಲವೆ? ನಿಮಗೆ ಗೊತ್ತಿದ್ದರೂ ನಿದ್ರಿಸುತ್ತಿದ್ದೀರಾ! ನಮ್ಮನ್ನು ಉದ್ದೇಶಿಸಿ ಮಾತನಾಡುವುದು ಬಿಟ್ಟು ಆ್ಯಪ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೀರಿ.  ಜಮ್ಮು ಕಾಶ್ಮೀರದಲ್ಲಿ ಹುತಾತ್ಮರಾದ ಪೈಲಟ್ ಬಗ್ಗೆ ಒಂದೇ ಒಂದು ಟ್ವೀಟ್ ಸಹ ಮಾಡಿಲ್ಲ..’ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment