ರಾಷ್ಟ್ರ ಸುದ್ದಿ

ಪ್ರತಿ ಕ್ಷೇತ್ರದ ಐದು ಇವಿಎಂ ಗಳ ವಿವಿಪ್ಯಾಟ್‌ ಪರಿಶೀಲನೆಗೆ ಸುಪ್ರೀಂ ಆದೇಶ

ಹೊಸದಿಲ್ಲಿ : ಪ್ರತಿ ಲೋಕಸಭಾ ಕ್ಷೇತ್ರದ ಒಂದು ಇವಿಎಂ ಬದಲು ಐದು ಇವಿಎಂ ಗಳ ವಿವಿಪ್ಯಾಟ್‌ (ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ ಟ್ರೇಲ್‌) ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ವಿವಿಪ್ಯಾಟ್‌ ಪರೀಶೀಲನೆಗಾಗಿ ಐದು ಇವಿಎಂ ಗಳನ್ನು ಕ್ರಮಾನುಸಾರ ರಹಿತವಾಗಿ ಆಯ್ಕೆ ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. 21 ವಿರೋಧ ಪಕ್ಷಗಳ ನಾಯಕರು ತಲಾ ಅಸೆಂಬ್ಲಿ ಕ್ಷೇತ್ರದ ಶೇ.50 ಇವಿಎಂ ಗಳ ವಿವಿಪ್ಯಾಟ್‌ ಪರಿಶೀಲನೆಯನ್ನು ಆಗ್ರಹಿಸಿದ್ದವು.

ತಲಾ ವಿಧಾನಸಭಾ ಕ್ಷೇತ್ರದ ಒಂದು ಇವಿಎಂ ಸಂಖ್ಯೆಯನ್ನು ಸುಪ್ರೀಂ ಕೋರ್ಟ್‌ ಐದಕ್ಕೆ ಏರಿಸಿದ್ದು ಇದು ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯುನ್ನತ ಮಟ್ಟದ ನಿಖರತೆ ಮತ್ತು ತೃಪ್ತಿಯನ್ನು ಖಾತರಿಪಡಿಸಿಕೊಳ್ಳಲು ಅಗತ್ಯವಿದೆ ಎಂದು ಹೇಳಿತು.

ಸುಪ್ರೀಂ ಕೋರ್ಟಿನ ಈ ಆದೇಶ ವಿರೋಧ ಪಕ್ಷಗಳಿಗೆ ಭಾರೀ ದೊಡ್ಡ ಹಿನ್ನಡೆಯಾಗಿದೆ. ಏಕೆಂದರೆ 10.35 ಲಕ್ಷ ಇವಿಎಂ ಗಳ ಪೈಕಿ ವಿವಿಪ್ಯಾಟ್‌ ಪರಿಶೀಲನೆಗೆ ಒಳಪಡುವ ಇವಿಎಂ ಗಳ ಸಂಖ್ಯೆ ಕೇವಲ 20,625 ಅಥವಾ ಶೇ.1.99 ಆಗಿರುತ್ತದೆ.

ಸುಪ್ರೀಂ ಕೋರ್ಟ್‌ ನಿರ್ದೇಶದ ಪ್ರಕಾರ ಪ್ರತಿಯೊಂದು ಕ್ಷೇತ್ರದ 5 ಇವಿಎಂ ಗಳು ವಿವಿಪ್ಯಾಟ್‌ ಗಳು ಮಾತ್ರವೇ ಭೌತಿಕ ಪರಿಶೀಲನೆಗೆ ಒಳಪಡಲಿವೆ. ವಿವಿಪ್ಯಾಟ್‌ ಹೆಚ್ಚಳದಿಂದ ಹೆಚ್ಚುವರಿ ಮಾನವ ಸಂಪನ್ಮೂಲ ಬೇಕಾಗುವುದಿಲ್ಲ ಮತ್ತು ಲೋಕಸಭಾ ಚುನಾವಣೆಗಳ ಫ‌ಲಿತಾಂಶ ಕೂಡ ವಿಳಂಬಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

About the author

ಕನ್ನಡ ಟುಡೆ

Leave a Comment