ಜೀವನ ಶೈಲಿ ದೇಶ ವಿದೇಶ

ಪ್ರತಿ ವರ್ಷ ವಿದೇಶದಿಂದ 4 ಲಕ್ಷ ಕೋಟಿ ಭಾರತಕ್ಕೆ!!!!!

ನ್ಯೂಯಾರ್ಕ್;ನಮ್ಮ ದೇಶದಿಂದ  ವಿದೇಶಗಳಿಗೆ ಕೆಲಸಕ್ಕೆಂದು ಹೋಗ್ತಾರೆ. ಇಲ್ಲಿಯ ಪ್ರತಿಭೆ ವಿದೇಶ ಸೇರುತ್ತಿದೆ ಎಂಬ ಆರೋಪಗಳಿಗೆಲ್ಲಾ ಇದೀಗ ಉತ್ತರ ಸಿಕ್ಕಿದೆ.

ಉತ್ತಮ ವೇತನ ಸಿಗುತ್ತೆ ಅಂತ ವಿದೇಶಗಳಿಗೆ ಹೋದವರ್ಯಾರೂ, ತಮ್ಮ ತವರಲ್ಲಿ ಇರುವ ಪೋಷಕರನ್ನು ಮರೆತಿಲ್ಲ ಎಂದು ಹೇಳುತ್ತಿದೆ ಒನ್‌ ಫ್ಯಾಮಿಲಿ ಅಟ್‌ ಎ ಟೈಮ್‌ ವರದಿ. ಇಲ್ಲಿಂದ ವಲಸೆ ಹೋದ ಭಾರತೀಯರು ಪ್ರತಿ ವರ್ಷ ಸುಮಾರು 62.7 ಶತಕೋಟಿ ಡಾಲರ್‌ (4 ಲಕ್ಷ ಕೋಟಿ ರೂ.) ಅನ್ನು ಸ್ವದೇಶಕ್ಕೆ ಕಳುಹಿಸುತ್ತಿದ್ದಾರೆ. ಇದು 2016ರ ಡೇಟಾ ಆಗಿದ್ದು, ಇದೇ ಮೊದಲ ಬಾರಿಗೆ ಭಾರತ ಮೊದಲ ಸ್ಥಾನಕ್ಕೆ ಬಂದಿದೆ.

ಭಾರತದ ನಂತರದ ಸ್ಥಾನದಲ್ಲಿ ಚೀನ ಇದೆ. ಇಲ್ಲಿಗೆ ವಲಸೆ ಹೋದವರು 61 ಶತಕೋಟಿ ಡಾಲರ್‌ ಹಣವನ್ನು ಮನೆಗೆ ಕಳುಹಿಸುತ್ತಿದ್ದಾರಂತೆ. ಕೃಷಿ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ನಿಧಿ ಎಂಬ ಹೆಸರಿನ ಸಂಸ್ಥೆ ಈ ಅಧ್ಯಯನ ನಡೆಸಿದೆ. ಇವರ ಪ್ರಕಾರ ಸುಮಾರು ಜಗತ್ತಿನ 20 ಕೋಟಿ ಮಂದಿ ತಮ್ಮ ದೇಶ ಬಿಟ್ಟು ಬೇರೆ ಕಡೆಗೆ ವಲಸೆ ಹೋಗಿದ್ದಾರೆ ಎಂಬುದು ಈ ಸಂಸ್ಥೆಯ ವರದಿ ಹೇಳಿದೆ.

23 ದೇಶಗಳಿಗೆ ನಿಧಿ
ಶೇ. 80 ರಷ್ಟು ವಲಸೆ ನಿಧಿಯನ್ನು ಪಡೆದಿರುವ ರಾಷ್ಟ್ರಗಳು ಕೇವಲ 23. ಇದರಲ್ಲಿ ಭಾರತ, ಚೀನ, ಫಿಲಿಪ್ಪಿನ್ಸ್‌, ಮೆಕ್ಸಿಕೋ ಮತ್ತು ಪಾಕಿಸ್ಥಾನ ಮುಂಚೂಣಿ ಯಲ್ಲಿವೆ. ಇನ್ನು ಹೆಚ್ಚಾಗಿ ಹಣ ಕಳುಹಿಸುತ್ತಿರುವುದು ಅಮೆರಿಕ, ಸೌದಿ ಅರೇಬಿಯ ಮತ್ತು ರಷ್ಯಾ. ಅಲ್ಲದೆ ಏಷ್ಯಾದಿಂದಲೇ ಹೆಚ್ಚು ಮಂದಿ ವಲಸೆ ತೆರಳುತ್ತಿದ್ದಾರೆ. ಇವರ ಪಾಲೇ ಶೇ.55 ರಷ್ಟಿದೆ ಎಂದು ಈ ವರದಿ ಹೇಳಿದೆ.

About the author

ಕನ್ನಡ ಟುಡೆ

Leave a Comment