ಸುದ್ದಿ

ಪ್ರಧಾನಿ ನರೇಂದ್ರ ಮೋದಿ ಮಾ.13ಕ್ಕೆ ರಾಯಚೂರಿಗೆ ಆಗಮಿಸಲಿದ್ದಾರೆ ಎಂದು ಹೇಳಿದರು ಸಿ.ಟಿ.ರವಿ

ರಾಯಚೂರು: ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ಕಾರ್ಯಕರ್ತರ ಸಮಾವೇಶಕ್ಕೆ ಪ್ರಧಾನಿ ಮೋದಿ ಅವರು ಆಗಮಿಸಲಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘‘ತಾತ್ಕಾಲಿಕವಾಗಿ ಈ ದಿನ ನಿಗದಿಮಾಡಲಾಗಿದೆ. ಮುಂದೆ ಕೆಲ ಬದಲಾವಣೆಗಳಾಗುವ ಸಾಧ್ಯತೆಯಿದೆ. ಈ ಸಮಾವೇಶದಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳಲಿದ್ದಾರೆ. ಸದ್ಯಕ್ಕೆ ಮೋದಿ ಅವರು ರಾಯಚೂರು ಭೇಟಿಯಷ್ಟೇ ಪಕ್ಷದ ಜಿಲ್ಲಾ ನಾಯಕರಿಗೆ ಮುಖ್ಯವಾಗಿದೆ.

ಸಮಾವೇಶ ಆಯೋಜಿಸಲು ರಾಯಚೂರು ಕೃಷಿ ವಿವಿ ಮತ್ತು ಯರಮರಸ್ ಅತಿಥಿ ಗೃಹ ಬಳಿಯ ಏರ್‌ಸ್ಟ್ರಿಪ್ ಸ್ಥಳವನ್ನು ಸದ್ಯಕ್ಕೆ ಆಯ್ಕೆ ಮಾಡಲಾಗಿದೆ. ಪ್ರಧಾನಿ ಅವರ ಭದ್ರತಾ ಸಿಬ್ಬಂದಿ ಸ್ಥಳ ಅಂತಿಮಗೊಳಿಸಲಿದ್ದಾರೆ ಎಂದು  ಸಿ.ಟಿ.ರವಿ ತಿಳಿಸಿದರು

About the author

ಕನ್ನಡ ಟುಡೆ

Leave a Comment