ರಾಷ್ಟ್ರ

ಪ್ರಧಾನಿ ಭಾಷಣಕ್ಕೆ ರಾಜ್ಯಸಭೆಯಲ್ಲಿ ಅಡ್ಡಿ

ನವದೆಹಲಿ : ರಾಜ್ಯಸಭೆಯಲ್ಲಿಂದು ನಿವೃತ್ತಿಯಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ನರೇಂದ್ರಮೋದಿ ಎದ್ದುನಿಂತಾಗ  ಪ್ರತಿಪಕ್ಷಗಳಿಂದ ತೀವ್ರ ಅಡ್ಡಿ ಉಂಟಾಯಿತ್ತು. ತ್ರಿವಳಿ ತಲಾಕ್ ನಿಷೇಧ ಸೇರಿದಂತೆ ಹಲವು ಮಹತ್ವದ ಬಿಲ್ ಗಳು ಕಾನೂನಿನ ಮಾನ್ಯತೆ ನೀಡಲು ಚರ್ಚೆ ನಡೆಯಬೇಕಾಗಿದೆ. ಆದರೆ ಪ್ರತಿಪಕ್ಷಗಳು ಇದರಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ನರೇಂದ್ರಮೋದಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಪಕ್ಷಗಳ ಅಡ್ಡಿಯ ನಡುವೆಯೂ ಮಾತು ಮುಂದುವರೆಸಿದ ಪ್ರಧಾನಿ ತ್ರಿವಳಿ ತಲಾಕ್ ಚರ್ಚೆಯ ಸಂದರ್ಭದಲ್ಲಿ ನಿವೃತ್ತರಾಗುತ್ತಿರುವ ಸದಸ್ಯರು ಸಂಸತ್ತಿನ ಭಾಗವಾಗುತ್ತಿರುವುದು   ದುರದೃಷ್ಟಕರ ಎಂದು ಹೇಳುತ್ತಾ ಹೊರಹೊಗುತ್ತಿರುವ ಸದಸ್ಯರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಿ ಸುಗಮ ಕಲಾಪಕ್ಕೆ ಪ್ರತಿಪಕ್ಷಗಳು ಮಾತ್ರವಲ್ಲದೇ ಸರ್ಕಾರದ ಜವಾಬ್ದಾರಿಯೂ ಹೆಚ್ಚಿದೆ ಎಂದರು. ಭಾರತದ ಪ್ರಜಾಪ್ರಭುತ್ವದಲ್ಲಿ ರಾಜ್ಯಸಭೆಯ ಪಾತ್ರ ಮಹತ್ವದಾಗಿದ್ದು. ಅನೇಕ ದಿಗ್ಗಜ ಸದಸ್ಯರು ಸೇವೆ ಸಲ್ಲಿಸಿದ್ದಾರೆ ಎಂದು ಗುಣಗಾನ ಮಾಡಿದ್ದರು. ಆದರೆ ಪ್ರಧಾನಿ ಭಾಷಣಕ್ಕೆ ಪ್ರತಿಪಕ್ಷಗಳ ಸದಸ್ಯರು ಅಡ್ಡಿಪಡಿಸುತ್ತಲೇ ಇದ್ದರು ಎಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment