ರಾಷ್ಟ್ರ

ಪ್ರಧಾನಿ ಮೋದಿಯನ್ನು ಸೋಲಿಸಲು ಮಮತಾ ಬ್ಯಾನರ್ಜಿ ಮಾಸ್ಟರ್ ಪ್ಲಾನ್

ಇಂದೋರ್: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದಿಂದ ದೂರವಿಡಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃತೀಯ ರಂಗ ರಚನೆಯಾಗಬೇಕು ಎಂದು ಭಾನುವಾರ ಕರೆ ನೀಡಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖ್ಯಾತ ಹಿರಿಯ ವಕೀಲ ಜೇಠ್ಮಲಾನಿ ಅವರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ವಿದೇಶಗಳಲ್ಲಿರುವ ಕಪ್ಪು ಹಣವನ್ನು ವಾಪಸ್ ದೇಶಕ್ಕೆ ತರುವಲ್ಲಿ ವಿಫಲವಾಗಿವೆ ಎಂದಿದ್ದಾರೆ.ಕಾಂಗ್ರೆಸ್ ಮತ್ತು ಬಿಜೆಪಿ ಜಂಟಿಯಾಗಿ ದೇಶದ ಜನತೆಗೆ ಮೋಸ ಮಾಡುತ್ತಿವೆ. ಹೀಗಾಗಿ ಪ್ರಾಮಾಣಿಕ ನಾಯಕರನ್ನೊಳಗೊಂಡ ತೃತೀಯ ರಂಗ ರಚನೆಯಾಗುವ ಅಗತ್ಯ ಇದೆ ಎಂದು ಜೇಠ್ಮಲಾನಿ ಹೇಳಿದ್ದಾರೆ.

ಪ್ರಧಾನಿ ಮೋದಿಯನ್ನು ಸೋಲಿಸಲು ಮಮತಾ ಬ್ಯಾನರ್ಜಿ ತೃತೀಯ ರಂಗದ ನೇತೃತ್ವವನ್ನು  ವಹಿಸಕೊಳ್ಳಬೇಕು ಮತ್ತು ಅವರಿಗೆ ಆ ಸಾಮಾರ್ಥ್ಯ ಇದೆ ಎಂದು  ಜೇಠ್ಮಲಾನಿ ಹೇಳಿದ್ದಾರೆ.

 

About the author

ಕನ್ನಡ ಟುಡೆ

Leave a Comment