ಅ೦ತರಾಷ್ಟ್ರೀಯ

ಪ್ರಧಾನಿ ಮೋದಿಯಿಂದ ‘ಮೋದಿ ಕುರ್ತಾ ಗಿಫ್ಟ್’: ಟ್ವಿಟರ್ ನಲ್ಲಿ ಸಂಭ್ರಮ ಹಂಚಿಕೊಂಡ ದಕ್ಷಿಣ ಕೊರಿಯಾ ಅಧ್ಯಕ್ಷ

ಸಿಯೋಲ್: ಪ್ರಧಾನಿ ನರೇಂದ್ರ ಮೋದಿ ಈಗ ಜಾಗತಿಕ ಮಟ್ಟದ ನಾಯಕ. ಅವರಷ್ಟೇ ಅಲ್ಲದೇ ಅವರು ಧರಿಸುವ ಉಡುಗೆಗಳೂ ಸಹ ಜಗತ್ಪ್ರಸಿದ್ಧವಾಗಿಬಿಟ್ಟಿವೆ. ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಸಹ ಮೋದಿಯವರಂತೆ ಕುರ್ತಾ ಧರಿಸಲು ಬಯಸುತ್ತೇನೆ ಎಂದಿದ್ದು ಹಳೆಯ ವಿಷಯ. ಹೊಸ ವಿಷಯ ಏನಪ್ಪಾ ಅಂದ್ರೆ ಮೋದಿ ಸ್ವತಃ ಗಿಫ್ಟ್ ಕೊಟ್ಟಿದ್ದ ಮೋದಿ ಕುರ್ತಾ ಧರಿಸಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್-ಜೇ-ಇನ್ ಟ್ವಿಟರ್ ನಲ್ಲಿ ಸಂಭ್ರಮಿಸಿದ್ದಾರೆ.
ಮೋದಿ ಕುರ್ತಾ ಧರಿಸಿರುವ ಅನುಭವದ ಬಗ್ಗೆ ಟ್ವೀಟ್ ಮಾಡಿರುವ ಮೂನ್-ಜೆ-ಇನ್  “ಕಳೆದ ಬಾರಿ ಭಾರತಕ್ಕೆ ಭೇಟಿ ನೀಡಿದ್ದಾಗ ಮೋದಿ ಅವರು ಧರಿಸಿದ್ದ ಉಡುಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೆ. ಮೋದಿ ಉಡುಪುಗಳೆಂದೇ ಖ್ಯಾತಿ ಪಡೆದಿರುವ ಉಡುಪುಗಳನ್ನು ನನ್ನ ಅಳತೆಗೆ ಸರಿಯಾಗಿ ಪ್ರಧಾನಿ ನರೇಂದ್ರ ಮೋದಿ ಕಳಿಸಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ದಕ್ಷಿಣ ಕೊರಿಯಾ ಅಧ್ಯಕ್ಷ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಸಿಯೋಲ್ ಶಾಂತಿ ಪ್ರಶಸ್ತಿಯ ಬಗ್ಗೆಯೂ ಮಾತನಾಡಿರುವ ದಕ್ಷಿಣ ಕೊರಿಯಾ ಅಧ್ಯಕ್ಷ, ಸಿಯೋಲ್ ಶಾಂತಿ ಪ್ರಶಸ್ತಿ ಪಡೆದಿರುವ ಬಗ್ಗೆ ಪ್ರಧಾನಿ ಮೋದಿ ಮಾಡಿರುವ ಟ್ವೀಟ್ ಗಳನ್ನು ಓದಿದ್ದೇನೆ, ಪ್ರಧಾನಿ ಮೋದಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ, ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂನ್-ಜೇ-ಇನ್ ಮಾಹಿತಿ ನೀಡಿದ್ದಾರೆ.

About the author

ಕನ್ನಡ ಟುಡೆ

Leave a Comment