ರಾಷ್ಟ್ರ ಸುದ್ದಿ

ಪ್ರಧಾನಿ ಮೋದಿ ತುಘಲಖ್ ರಂತೆ, ಯೋಗಿ ಔರಂಗಜೇಬ್ ರಂತೆ ವರ್ತಿಸುತ್ತಿದ್ದಾರೆ: ರಂದೀಪ್

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ತುಘಲಖ್’ರಂತೆ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಔರಂಗಜೇಬ್’ರಂತೆ ವರ್ತಿಸುತ್ತಿದ್ದಾರೆಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ.
ಯೋಗಿ ಆದಿತ್ಯನಾಥ್ ಬೆಂಬಲಿತ ಬಲಪಂಥೀಯ ಸಂಘಟನೆಯಾಗಿರುವ ಹಿಂದೂ ಯುವ ವಾಹಿನಿ ನಿನ್ನೆಯಷ್ಟೇ ಘಷಣೆಯೊಂದನ್ನು ಮಾಡಿತ್ತು. ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ತಲೆ ಕಡಿದವರಿಗೆ ರೂ.10ಮಿಲಿಯನ್ ನೀಡುವುದಾಗಿ ಹೇಳಿತ್ತು. ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೇವಾಲಾ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಹೊರಟು ಹೋಗಿದೆಯೇ? ಅಥವಾ ಯೋಗಿ ಆದಿತ್ಯನಾಥ್ ಅವರು ಔರಂಗಜೇಬ್ ಆಗಿ ಹೋಗಿದ್ದಾರೆಯೇ? ಮೋದಿಯವರು ಮುಹಮ್ಮದ್ ಬಿನ್ ತುಘಲಕ್ ರಂತೆ ವರ್ತಿಸುತ್ತಿದ್ದರೆ, ಯೋಗಿ ಆದಿತ್ಯನಾಥ್ ಅವರು ಔರಂಗಜೇಬ್ ರಂತೆ ವರ್ತಿಸುತ್ತಿದ್ದಾರೆ. ದೇಶದಲ್ಲಿ ಕಾನೂನು ಇದೆಯೇ? ಸಂವಿಧಾನ ರಾಷ್ಟ್ರವನ್ನು ಆಳುತ್ತಿದೆಯೇ? ಅಥವಾ ಗೂಡಾಗಿರಿಯೇ ರಾಷ್ಟ್ರವನ್ನು ನಡೆಸುತ್ತಿದೆಯೇ? ಇಂತಹ ಬೆಳವಣಿಗೆಯನ್ನು ನಾವೀಗ ಉತ್ತರಪ್ರದೇಶದಲ್ಲಿ ನೋಡುತ್ತಿದ್ದೇವೆಂದು ವಾಗ್ದಾಳಿ ನಡೆಸಿದ್ದಾರೆ.
ಬಳಿಕ ಬುಲಂದರ್ ಶೆಹರ್ ಹಿಂಸಾಚಾರ ಕುರಿತಂತೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಪೊಲೀಸ್ ಅಧಿಕಾರಿಗೆ ತಲೆಗೆ ಗುಂಡು ಬಿದ್ದು ಸಾವನ್ನಪ್ಪಿದ್ದಾರೆ. ಪ್ರಕರಣದಲ್ಲಿ ಬಿಜೆಪಿ ನಾಯಕರ ಹೆಸರೂ ಕೂಡ ಕೇಳಿಬಂದಿದೆ. ಆದರೂ, ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಇದೀಗ ಜನರ ತಲೆ ಕಡಿದವರಿಗೆ ಇನಾಮು ಘೋಷಣೆ ಮಾಡಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ, ದೇಶದಲ್ಲಿ ತಾಲಿಬಾನ್ ವ್ಯವಸ್ಥೆ ನಡೆಯುತ್ತಿದೆಯೇ ಎಂಬ ಪ್ರಶ್ನೆ ಮೂಡುತ್ತದೆ. ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿರುವಾಗ ಯೋಗಿ ಆದಿತ್ಯನಾಥ್ ಅವರು ಕಬ್ಬಡ್ಡಿ ನೋಡಿ ಸಂತಸ ಪಡುತ್ತಿದ್ದಾರೆ. ಇತರೆ ರಾಜ್ಯಗಳಿಗೇಕೆ ಹೋಗ ಯೋಗಿ ಆದಿತ್ಯನಾಥ್ ಅವರು ಪ್ರಚಾರ ನಡೆಸುತ್ತಿದ್ದಾರೆ? ಮೃತ ಅಧಿಕಾರಿಯ ಮನೆಗೆ ಹೋಗಿ ಸಾಂತ್ವನ ಹೇಳುವ ಬದಲಿಗೆ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಯ ಕುಟುಂಬಸ್ಥರಿಗೆ ಭೇಟಿಯಾಗುವಂತೆ ಸಮನ್ಸ್ ಜಾರಿ ಮಾಡಿದ್ದಾರೆಂದು ಕಿಡಿಕಾರಿದ್ದಾರೆ.

About the author

ಕನ್ನಡ ಟುಡೆ

Leave a Comment