ರಾಷ್ಟ್ರ ಸುದ್ದಿ

ಪ್ರಧಾನಿ ಮೋದಿ ನಿವೃತ್ತಿ ಹೊಂದಿದ ದಿನವೇ ನಾನು ರಾಜಕೀಯ ತೊರೆಯುವೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ

ಪುಣೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಹೊಂದಿದ ಕ್ಷಣವೇ ನಾನು ರಾಜಕೀಯ ತೊರೆಯುವೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಘೋಷಿಸಿದ್ದಾರೆ. ಪುಣೆಯಲ್ಲಿ ನಡೆದ ವರ್ಡ್ಸ್ ಕೌಂಟ್ ಫೆಸ್ಟಿವಲ್ ನಲ್ಲಿ ಭಾಗವಹಿಸಿ ಮಾತನಾಡಿದ ಸ್ಮೃತಿ ಇರಾನಿ ‘ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಅವರಂಥ ವರ್ಚಸ್ವಿ ನಾಯಕರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದ ಸಂತೋಷ ನನ್ನಲಿದೆ. ಪ್ರಧಾನ ಸೇವಕ ಎಂದು ಹೇಳಿಕೊಳ್ಳಲು ಮೋದಿ ಅವರಿಂದ ಸಾಧ್ಯ. ನಾವು ಆ ಮಟ್ಟಕ್ಕೆ ಮುಟ್ಟಿಲ್ಲ ಎಂದು ಹೇಳಿದ್ದಾರೆ. ಮೋದಿ ದೀರ್ಘಕಾಲದ ರಾಜಕೀಯದಲ್ಲಿ ಇರುವುದಿಲ್ಲ ಎಂದು ನೀವು ಭಾವಿಸುತ್ತೀರಾ ಎಂದು ಪ್ರಶ್ನಿಸಿದ ಸ್ಮೃತಿ ಅವರು ಇನ್ನೂ ಅನೇಕ ವರ್ಷಗಳ ಕಾಲ ರಾಜಕೀಯದಲ್ಲಿರಲಿದ್ದಾರೆ ಎಂದು ಹೇಳಿದ್ದಾರೆ. ನನ್ನ ದೇಶಕ್ಕಾಗಿ ನಾನು ನನ್ನ ಜೀವನವನ್ನು ಮೀಸಲಿಡಬೇಕು ಎಂದು ನಾನು ನಿರ್ಧರಿಸಿದ್ದೇನೆ, ಸ್ವತಂತ್ರ್ಯ ಭಾರತದಲ್ಲಿ ನಾನು ನನ್ನ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದಾದರೇ ಸ್ವಾತಂತ್ರ್ಯದ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.

About the author

ಕನ್ನಡ ಟುಡೆ

Leave a Comment