ರಾಷ್ಟ್ರ

ಪ್ರಧಾನಿ ವೆಬ್‌ಸೈಟ್‌ ಸರ್ವರ್‌ ಅಮೆರಿಕದಲ್ಲಿದೆ, ಆದರೆ ಮಾಹಿತಿ ಸೋರಿಕೆ ಆಗಲ್ಲ

ದಿಲ್ಲಿ : ಕಳೆದ ಕೆಲವು ದಿನಗಳಿಂದ ನರೇಂದ್ರ ಮೋದಿ ವೆಬ್‌ಸೈಟ್‌ ಹಾಗೂ ಕಾಂಗ್ರೆಸ್‌ ಆ್ಯಪ್‌ ಭಾರಿ ಚರ್ಚೆಗೆ ಕಾರಣವಾಗಿತ್ತು.
ಈಗಾಗಲೇ ಕಾಂಗ್ರೆಸ್ ಆ್ಯಪ್‌ ಅನ್ನು ಪ್ಲೇ ಸ್ಟೋರ್‌ನಿಂದಲೇ ತೆಗೆದುಹಾಕಲಾಗಿದೆ.

ನರೇಂದ್ರ ಮೋದಿ ಡಾಟ್‌ ಇನ್‌ ಬಗ್ಗೆ ಇರುವ ಗೊಂದಲಗಳಿಗೆ ಬಿಜೆಪಿ ವಕ್ತಾರರೊಬ್ಬರು ಸ್ಪಷ್ಟನೆ ನೀಡಿದ್ದಾರೆ.ಚೆನ್ನೈನಲ್ಲಿ ಮಾತನಾಡಿದ ಬಿಜೆಪಿ ವಕ್ತಾರರೊಬ್ಬರು, ಮೋದಿ ಅವರ ವೆಬ್‌ಸೈಟ್‌ನಿಂದ ಮಾಹಿತಿ ಸೋರಿಕೆಯಾಗುತ್ತದೆ ಎಂಬ ಆರೋಪಗಳು ಶುದ್ಧ ಸುಳ್ಳು ಎಂದು ಹೇಳಿದ್ದಾರೆ.

ಇದೇ ವೇಳೆ ದಿಲ್ಲಿ ಮೂಲದ ಸೆಕ್ಯುರಿಟಿ ಸಂಶೋಧಕ ಕರಣ್‌ ಸೈನಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ನರೇಂದ್ರ ಮೋದಿ ಡಾಟ್‌ ಇನ್‌ ವೆಬ್‌ಸೈಟ್‌ನ ಐಪಿ ಅಡ್ರೆಸ್‌ ಅಮೆರಿಕದಲ್ಲಿದೆ. ಇದರ ಸರ್ವರ್‌ ಅಮೆರಿಕದ ಕೇಂಬ್ರಿಡ್ಜ್‌ನ ಮೆಸಾಚ್ಯುಯೆಟ್ಸ್‌ನಲ್ಲಿದೆ. ಅಕ್ಮಾಯ್‌ ಟೆಕ್ರಾಲಜೀಸ್‌ ಸರ್ವರ್‌ ನಿರ್ವಹಣೆ ಮಾಡುತ್ತಿದೆ. ಭಾರತದಿಂದ ಹೊರಗೆ ಸರ್ವರ್‌ ಇದ್ದರೆ ಯಾವುದೇ ತೊಂದರೆ ಇಲ್ಲ. ಇದು ಕೇವಲ ಮೆಮೊರಿ ಸ್ಟೋರೇಜ್‌ ಮಾದರಿಯಲ್ಲಿರುತ್ತದೆ. ಇದರಿಂದ ಯಾವುದೇ ಮಾಹಿತಿ ಸೋರಿಕೆಯಾಗುವುದಿಲ್ಲ ಎಂದು ಸೈನಿ ತಿಳಿಸಿದ್ದಾರೆ.

ಆದರೆ ಕಾನೂನು ಹೋರಾಟದ ಸಂದರ್ಭದಲ್ಲಿ ಮಾಹಿತಿ ವಿನಿಮಯ ಆಗುವ ಸಾಧ್ಯತೆ ಮಾತ್ರ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮೋದಿ ವೆಬ್‌ಸೈಟ್‌ನಿಂದ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಫ್ರೆಂಚ್‌ ಸೈಬರ್‌ ಸೆಕ್ಯುರಿಟಿ ಸಂಶೋಧಕ ಆರೋಪ ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು.

About the author

ಕನ್ನಡ ಟುಡೆ

Leave a Comment