ರಾಷ್ಟ್ರ

ಪ್ರಭಾವಿ ಮುಖಂಡರ ಪಟ್ಟಿಯಲ್ಲಿ ಮುಕೇಶ್ಅಂಬಾನಿ

ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ಅಂಬಾನಿ ಅವರು, ಫೋರ್ಚುನ್ ನಿಯತಕಾಲಿಕೆ ಪ್ರಕಟಿಸಿರುವ 2018ರ ವಿಶ್ವದ ಪ್ರಭಾವಿ ಮುಖಂಡರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ, ವಿಶ್ವದ 50 ಪ್ರಭಾವಿ ಮುಖಂಡರ ಪಟ್ಟಿಯಲ್ಲಿ ಮಾನವಹಕ್ಕುಗಳ ಹೋರಾಟಗಾರ್ತಿ ಇಂದಿರಾ ಜೈಸಿಂಗ್, ವಾಸ್ತುಶಿಲ್ಪಿ ಬಾಲಕೃಷ್ಣದೋಷಿ ಅವರೂ ಅವಕಾಶ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಆಪಲ್ ಸಿಇಓ ಟಿಮ್ ಕುಕ್, ನ್ಯೂಜಿಲ್ಯಾಂಡ್ ಪ್ರಧಾನಿ ಜೆಸಿಂದ ಆಡರ್ನ್ ಮತ್ತು ಫುಟ್ಬಾಲ್ ಕೋಚ್ ನಿಕ್ ಸಬನ್  ಸೇರಿದ್ದಾರೆ. ಮುಕೇಶ್ ಅಂಬಾನಿ ಅವರು ಅಗ್ಗದ ದರದಲ್ಲಿ ಮೊಬೈಲ್ ಡೇಟಾ ಒದಗಿಸಿ ಎರಡು ವರ್ಷಗಳ ಅಲ್ಪಾವಧಿಯಲ್ಲಿ ದೇಶದ ದೂರಸಂಪರ್ಕ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆ ತಂದಿದ್ದಾರೆ ಎಂದು ನಿಯತಕಾಲಿಕೆ ಬಣ್ಣಿಸಿದೆ. ಪಟ್ಟಿಯಲ್ಲಿ ಇವರು 24ನೆ ಸ್ಥಾನದಲ್ಲಿ ಇದ್ದಾರೆ.‘ ಲಾಯರ್ಸ್ ಕಲೆಕ್ಟಿವ್ಸ್’ ವೇದಿಕೆಯ ಸ್ಥಾಪಕರಾಗಿರುವ ಇಂದಿರಾ ಜೆ ಸಿಂಗ್ ಅವರು ಬಡವರಿಗೆ ದನಿಯಾಗಿದ್ದಾರೆ. ಅವರು ಅನ್ಯಾಯದ ವಿರುದ್ಧದ ಹೋರಾಟಕ್ಕೆ ತಮ್ಮ ಜೀವನ ಮುಡಿಪಾಗಿ ಇಟ್ಟಿದ್ದಾರೆ ಎಂದು ಬಣ್ಣಿಸಿದೆ. ಇವರು 20ನೇ ಸ್ಥಾನದಲ್ಲಿ ಇದ್ದಾರೆ. ಭೋಪಾಲ್ ಅನಿಲದುರಂತದ ಸಂತ್ರಸ್ತರ ಪರವಾಗಿ ಹೋರಾಟ ನಡೆಸಿದ್ದ ಇಂದಿರಾ, ಕೌಟುಂಬಿಕ ಹಿಂಸೆ ತಡೆ ಕಾಯ್ದೆಯ ಕರಡುರೂಪಿಸುವಲ್ಲಿ ಭಾಗವಹಿಸಿದ್ದರು. 43ನೇ ಸ್ಥಾನದಲ್ಲಿ ಇರುವ ವಾಸ್ತುಶಿಲ್ಪಿ ವಿಶ್ವದ ಪ್ರಭಾವಿ ಮುಖಂಡರನ್ನು ಗುರುತಿಸುವ ಕಾರ್ಯ 2015ರಲ್ಲಿ ಚಾಲನೆಗೆ ಬಂದಿತ್ತು. ಇದುವರೆಗೆ ಪೋಪ್ ಫ್ರಾನ್ಸಿಸ್ , ಅಂಗ್  ಸಾನ್ ಸೂಕಿ , ಮಿಲಿಂದ ಗೇಟ್ಸ್ ,  ಏಂಜೆಲಾ ಮರ್ಕೆಲ್,  ಮತ್ತಿತರರು ಈ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.

About the author

ಕನ್ನಡ ಟುಡೆ

Leave a Comment