ರಾಜಕೀಯ

ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಪಕ್ಷ ಬಿಡುವುದಿಲ್ಲ:ಪ್ರಮೋದ್​ ಮಧ್ವರಾಜ್

ಉಡುಪಿ : ಕಾಂಗ್ರೆಸ್​ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ  ನಾನಿಲ್ಲಿ ನೆಮ್ಮದಿಯಾಗಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಪಕ್ಷ ಬಿಡುವುದಿಲ್ಲ ಎಂದು ಸಚಿವ ಪ್ರಮೋದ್​ ಮಧ್ವರಾಜ್​ ತಿಳಿಸಿದ್ದಾರೆ.

ಬಿಜೆಪಿ ಸೇರ್ಪಡೆ ವಿಚಾರವಾಗಿ ದೆಹಲಿಗೆ ಹೋದಾಗ ನಾನು ಯಾವ ಬಿಜೆಪಿ ನಾಯಕರನ್ನೂ ಭೇಟಿ ಮಾಡಿಲ್ಲ. ಆಸ್ಕರ್ ಫರ್ನಾಂಡಿಸ್​ ಭೇಟಿಗೆ ಹೋಗಿದ್ದೆ ಎಂದು ಪಕ್ಷ ಬಿಡುವ ಊಹಾಪೋಹಗಳಿಗೆ ಪ್ರಮೋದ್ ಮಧ್ವರಾಜ್ ಸ್ಪಷ್ಟನೆ ನೀಡಿದ್ದಾರೆ. ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಉಡುಪಿಯ ಪ್ರವಾಸಿ ಬಂಗಲೆ ಆವರಣದಲ್ಲಿದ್ದ ಮಧ್ವರಾಜ್​ ಅವರ ಪ್ರಚಾರ ವಾಹನವನ್ನು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೈ ಚಿಹ್ನೆ ಹಾಗೂ ಪ್ರಮೋದ್ ಮಧ್ವರಾಜ್ ಭಾವಚಿತ್ರ ಇದ್ದ ವಾಹನದಲ್ಲಿ ಪ್ರಚಾರ ನಡೆಸಲಾಗುತ್ತಿತ್ತು. ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂವಿತಾ ದಾಳಿ ನಡೆಸಿ ವಾಹನವನ್ನು ಜಪ್ತಿ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment