ರಾಷ್ಟ್ರ ಸುದ್ದಿ

ಪ್ರಯಾಗ್ ರಾಜ್, ವಾರಾಣಸಿಯಿಂದ ಪ್ರಚಾರದ ಅಖಾಡಕ್ಕೆ ಧುಮುಕ್ಕಲಿರುವ ಪ್ರಿಯಾಂಕಾ ಗಾಂಧಿ

ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಪೂರ್ವ ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಪ್ರಯಾಗ್ ರಾಜ್ ನಿಂದ 2019ರ ಲೋಕಸಭಾ ಸಮರದ ಪ್ರಚಾರದ ಅಖಾಡಕ್ಕೆ ಧುಮುಕ್ಕಲಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ  ಪ್ರಚಾರ ಆರಂಭಿಸುವುದರೊಂದಿಗೆ ರಾಷ್ಟ್ರ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಉತ್ತರ ಪ್ರದೇಶದ ಚುನಾವಣಾ ಅಖಾಡ ಮುಂದಿನ ದಿನಗಳಲ್ಲಿ ಮತ್ತಷ್ಟು ರಂಗೇರಲಿದೆ. ಮಾರ್ಚ್ 18 ರಂದು ಪ್ರಯಾಗ್ ರಾಜ್ ಗೆ ತೆರಳಲಿರುವ ಪ್ರಿಯಾಂಕಾ ಗಾಂಧಿ,  ಪ್ರವಿತ್ರ ಗಂಗಾ ನದಿ ದಡದಲ್ಲಿ ವಾಸಿಸುತ್ತಿರುವ ಜನರನ್ನು ಭೇಟಿ  ನೀಡಲಿದ್ದು, ಬೋಟ್ ರೈಡ್ ಮಾಡಲಿದ್ದಾರೆ.  ನೆಹರೂ ಕುಟುಂಬದ ಪುರಾತನ ಮನೆ ಆನಂದ್ ಭವನಕ್ಕೂ ಪ್ರಿಯಾಂಕ ಗಾಂಧಿ ಭೇಟಿ ನೀಡುವ ಸಾಧ್ಯತೆ ಇದೆ.

ಪ್ರಯಾಗ್ ರಾಜ್ ಭೇಟಿ ನಂತರ  ವಾರಾಣಸಿಯ ಪ್ರಸಿದ್ಧ ದೇವಾಲಯಗಳಿಗೆ ಪ್ರಿಯಾಂಕಾ ಭೇಟಿ ನೀಡುವ ಸಾಧ್ಯತೆ ಇದೆ. ಆದರೆ. ಈ ವರೆಗೂ ಈ ಭೇಟಿ ಬಗ್ಗೆ ಪಕ್ಷ  ಯಾವುದೇ ಮಾಹಿತಿ ಬಿಡುಗಡೆ ಮಾಡಿಲ್ಲ. ನಂತರ ಮಾರ್ಚ್ 20 ರಂದು ಅವರು ದೆಹಲಿಗೆ ವಾಪಾಸ್ಸಾಗುವ ಸಾಧ್ಯತೆ ಇದೆ.ಪ್ರಯಾಗ್ ರಾಜ್ ಭೇಟಿ ವೇಳೆಯಲ್ಲಿ ಲಖನೌದಲ್ಲಿ ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಪ್ರಿಯಾಂಕಾ ಸಭೆ ನಡೆಸಲಿದ್ದಾರೆ. ಚುನಾವಣೆ ನಿರ್ವಹಣೆ ಹಾಗೂ ರಾಜ್ಯದಲ್ಲಿ ಪಕ್ಷ ಬಲವರ್ದನೆ ನಿಟ್ಟಿನಲ್ಲಿ ಮಾತನಾಡಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.ಬಿಎಸ್ ಪಿ ಹಾಗೂ ಎಸ್ಪಿ ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡ ನಂತರ ಕಾಂಗ್ರೆಸ್ ಈಗ 80 ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದೆ. ಆದರೆ, ರಾಯ್ ಬರೇಲಿ ಹಾಗೂ ಅಮೇಥಿಯಲ್ಲಿ ಬಿಎಸ್ಪಿ ಹಾಗೂ ಎಸ್ಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಹಾಕುತ್ತಿಲ್ಲ.

About the author

ಕನ್ನಡ ಟುಡೆ

Leave a Comment