ರಾಜ್ಯ ಸುದ್ದಿ

ಪ್ರಸಿದ್ಧ ಯಕ್ಷ ದಿಗ್ಗಜ ಜಲವಳ್ಳಿ ವೆಂಕಟೇಶ ರಾವ್ ನಿಧನ

ಹೊನ್ನಾವರ: ಪ್ರಸಿದ್ಧ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಇಂದು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.ಯಕ್ಷಗಾನ ರಂಗದಲ್ಲಿ ತನ್ನದೇ ಆದ ಗತ್ತು ಗೈರತ್ತಿನಿಂದ ತೆಂಕು ತಿಟ್ಟು, ಬಡಗುತಿಟ್ಟಿನ ಅಗ್ರಮಾನ್ಯ ಕಲಾವಿದರಾಗಿದ್ದ ಇವರು  ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬುದು ತಿಳಿದುಬಂದಿದೆ.

ತನ್ನ ಅತ್ಯದ್ಬುತ ಕಂಠದಿಂದ ಹಲವು ಪಾತ್ರಗಳಿಗೆ ಜೀವ ತುಂಬಿದ್ದ ಜಲವಳ್ಳಿಯವರು ನಾಟ್ಯಕ್ಕೆ ಅಷ್ಟೇನು ಪ್ರಾಮುಖ್ಯ ನೀಡದಿದ್ದರೂ ಗತ್ತು ಮತ್ತು ಗೈರತ್ತಿನ ದೊರೆಯಾಗಿ ಕಾಣಿಸಿಕೊಂಡಿದ್ದರು.ತೆಂಕು ತಿಟ್ಟಿನ ಸುರತ್ಕಲ್ , ಬಡಗಿನ ಗುಂಡಬಾಳ, ಇಡಗುಂಡಿ ಮತ್ತಿತರ ಮೇಳದಲ್ಲಿ 24 ವರ್ಷ ತಿರುಗಾಟ ಮಾಡಿದ್ದ  ಜಲವಳ್ಳಿ ಅವರು ಸಾಲಿಗ್ರಾಮ ಮೇಳದಲ್ಲಿ ಸುಧೀರ್ಘ 24 ವರ್ಷ ತಿರುಗಾಟ ಮಾಡಿ ಪ್ರಧಾನ ವೇಷಧಾರಿಯಾಗಿ ಖ್ಯಾತಿಯ ಉತ್ತುಂಗಕ್ಕೇರಿದ್ದರು. ಶನೀಶ್ವರ ಮಹಾತ್ಮೆಯ ಶನಿ, ರಾವಣ, ಭೀಮ, ಈಶ್ವರ, ಸುದರ್ಶನ ಮೊದಲಾದ ಪಾತ್ರಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು.ದಿವಗಂಗ ಕಾಳಿಂಗ ನಾವಡರ ಪ್ರೀತಿ ಪಾತ್ರ ಕಲಾವಿದರಾಗಿದ್ದ ವೆಂಕಟೇಶ ರಾಯರು , ದಿವಂಗತ ಪದ್ಮಶ್ರೀ  ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರೊಂದಿಗೆ ಜೋಡಿ  ಪಾತ್ರಗಳಲ್ಲಿ ಮಿಂಚಿದ್ದರು.

About the author

ಕನ್ನಡ ಟುಡೆ

Leave a Comment