ರಾಜ್ಯ ಸುದ್ದಿ

ಪ್ರಿಯಕರನ ಚಾಲೆಂಜ್​ ಸ್ವೀಕರಿಸಿ; ಸಾವನ್ನಪ್ಪಿದ ಯುವತಿ

ಬೆಂಗಳೂರು : ಪ್ರಿಯಕರ ಹಾಕಿದ ಚಾಲೆಂಜ್​ ಸ್ವೀಕರಿಸಿ, ತನ್ನ ಪ್ರೀತಿ ಸಾಬೀತು ಮಾಡಲು ಹೋದ ಯುವತಿಯೊಬ್ಬಳ್ಳು ಸಾವನ್ನಪ್ಪಿರುವ ಘಟನೆ ನಗರದ ಕಿತ್ತಿಗನೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ದಿವ್ಯಾ (19) ಸಾವನ್ನಪ್ಪಿದ ಯುವತಿ. ಎದುರು ಮನೆಯ ಯುವಕ  ಹರೀಶ್​ (21) ಮತ್ತು  ದಿವ್ಯಾ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಒಂದೂವರೆ ವರ್ಷದಿಂದ ಪ್ರೀತಿ ಮಾಡುತ್ತಿದ್ದ ಈ ಇಬ್ಬರು ಹಿಂದೆ ಮನೆ ಬಿಟ್ಟು ಕೂಡ ಓಡಿ ಹೋಗಿದ್ದರು. ಬಳಿಕ ಇವರಿಬ್ಬರನ್ನು ಕರೆ ತಂದು ಪೋಷಕರು ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿಸಿ, ಮದುವೆ ಮಾಡಿಸುವ ಭರವಸೆ ನೀಡಿದ್ದರು. ಅಲ್ಲದೆ, ಮದುವೆಯಾಗಲು 15 ಲಕ್ಷವನ್ನು ಯುವಕ ಬೇಡಿಕೆ ಇಟ್ಟಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಈ ವೇಳೆ ಹರೀಶ್​ಗೆ ಮತ್ತೊಂದು ಯುವತಿ ಜೊತೆ ಸ್ನೇಹ ಬೆಳೆದಿದೆ. ಈ ಬಗ್ಗೆ ದಿವ್ಯಾ ಪ್ರಶ್ನಿಸಿದ್ದಾಳೆ. ಆ ನಿನ್ನ ಪ್ರೀತಿಯ ಮೇಲೆ ನನಗೆ ಅನುಮಾನವಿದೆ. ಈ ಕಾರಣಕ್ಕಾಗಿ ಬೇರೊಬ್ಬ ಯುವತಿ ಜೊತೆ ಸ್ನೇಹ ಬೆಳೆಸಿದ್ದೇನೆ ಎಂದಿದ್ದಾನೆ.

About the author

ಕನ್ನಡ ಟುಡೆ

Leave a Comment