ಸಿನಿ ಸಮಾಚಾರ

ಪ್ರಿಯಾಮಣಿ ರಾಜಕೀಯ ಪ್ರವೇಶ

ಬೆಂಗಳೂರು:ತನ್ನ ನಟನೆಯ ಮೂಲಕ ದಕ್ಷಿಣ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ನಟಿ ಪ್ರಿಯಾ ಮಣಿ ಪಾಲಿಟಿಕ್ಸ್‌ಗೆ ಬರುತ್ತಿದ್ದಾರೆ ಎಂಬ ಕೇಳಿಬರುತ್ತಿದೆ.ಇತ್ತೀಚೆಗಷ್ಟೇ ಮದುವೆಯಾಗಿರುವ ಪ್ರಿಯಾಮಣಿ ರಾಜಕೀಯಕ್ಕೆ ಹೋದರೆ ಸಿನಿಮಾ ಹೇಗೆ ಎಂಬ ಆತಂಕ ಅಭಿಮಾನಿಗಳಲ್ಲಿ ಕಾಡಿದೆಯಂತೆ.ಪ್ರಿಯಾಮಣಿ “ಧ್ವಜ” ಎಂಬ ಪೊಲಿಟಿಕಲ್‌ ಥ್ರಿಲ್ಲರ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ.ಅದಕ್ಕೆ ಜನ ಪ್ರಿಯಾಮಣಿ ರಾಜಕೀಯಕ್ಕೆ ಬರುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ  ಆದರೆ ಅದು ಧ್ವಜ ಚಿತ್ರದ ಫೋಟೋಗಳು ಎಂದು ತಿಳಿದು ಎಲ್ಲರು ಸುಮ್ಮನಾಗಿದ್ದಾರೆ.

ಸಿನಿಮಾ ಪೋಟೋಗ್ರಫರ್‌ ಅಶೋಕ್‌ ಕಶ್ಯಪ್‌ ನಿರ್ದೇಶನ ಮಾಡುತ್ತಿರುವ “ಧ್ವಜ” ಚಿತ್ರದಲ್ಲಿ “ರವಿ ಗೌಡ” ಎಂಬ ಹೊಸ ಪ್ರತಿಭೆ ನಾಯಕರಾಗಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಮಣಿ “ರಮ್ಯ” ಎಂಬ ಹೆಸರಿನಿಂದ ರಾಜಕೀಯ ವ್ಯಕ್ತಿಯಾಗಿ ನಟಿಸಿದ್ದಾರೆ. ಮದುವೆಯಾದ ಮೇಲೆ ಮೊದಲ ಬಾರಿಗೆ ನಟಿಸುತ್ತಿರುವ ಕನ್ನಡ ಚಿತ್ರ ಇದಾಗಿದೆ.

About the author

ಕನ್ನಡ ಟುಡೆ

Leave a Comment